ಉಡುಪಿ:ಕೊರೊನಾ ಪಾಸಿಟಿವ್ ಕೇಸುಗಳ ಸಂಖ್ಯೆಯನ್ನು ಹತೋಟಿಗೆ ತರಲು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಗೆ ತರಲಾಗಿದೆ. ಹೀಗಿದ್ದರೂ ಹೊರಜಿಲ್ಲೆಯ ಹಾಗೂ ಹೊರರಾಜ್ಯದ ಪ್ರವಾಸಿಗರು ಈ ನಿಯಮವನ್ನು ಪಾಲಿಸುತ್ತಿಲ್ಲ. ಪ್ರವಾಸಿ ತಾಣಕ್ಕೆ ಭೇಟಿ ನೀಡಲು ಅವಕಾಶ ಇಲ್ಲ ಎಂದು ಜಿಲ್ಲಾಡಳಿತದ ಕಟ್ಟುನಿಟ್ಟಿನ ಸೂಚನೆ ಇದ್ದರೂ ನೂರಾರು ಜನರು ಮಲ್ಪೆ ಬೀಚ್ಗೆ ಇಳಿದಿದ್ದಾರೆ.
ಬೀಚ್ನಿಂದ ಕೊಂಚ ದೂರದಲ್ಲಿ ಅಪಾಯಕಾರಿ ಎನಿಸುವ ಜಾಗದಲ್ಲಿ ಜನರು ನೀರಿಗೆ ಇಳಿಯುತ್ತಿದ್ದಾರೆ. ಇಂತವರನ್ನು ಕಂಡ ಕೂಡಲೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಪಸ್ ಕಳುಹಿಸುತ್ತಿದ್ದಾರೆ.
ವಾರಾಂತ್ಯದಲ್ಲಿ ಬೀಚ್ ಆಸುಪಾಸಿನಲ್ಲಿ ಮೀನುಗಾರಿಕಾ ರಸ್ತೆಯಲ್ಲಿ ಜನ ಜಮಾಯಿಸಕೂಡದು ಎಂದು ತಿಳಿಸುವ ಹೈವೇ ಪೆಟ್ರೋಲ್ ಪೊಲೀಸರು ಹೆಚ್ಚುವರಿ ಗಸ್ತು ತಿರುಗುತ್ತಿದ್ದಾರೆ.