ಕರ್ನಾಟಕ

karnataka

ETV Bharat / state

ಕಾರ್ಕಳದಲ್ಲಿ ದಿಢೀರ್​​ ಬಂದ ಭಾರೀ ಸುಂಟರಗಾಳಿ: 200 ಮೀ. ಮೇಲಕ್ಕೆ ಚಿಮ್ಮಿದ ನೀರು! - ಸುಲೋಚನ ನಾಯಕ್​

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೊಪ್ಪಳ ಮಂಚಕಲ್ಲು ಬಳಿ ಇಂದು ಬೆಳಗ್ಗೆ ದಿಢೀರ್​​ ಅಂತಾ ಬಂದ ಸುಂಟರಗಾಳಿಗೆ ಜನತೆ ಬೆಚ್ಚಿಬಿದ್ದಿದ್ದು, ಗಾಳಿಯ ರಭಸಕ್ಕೆ 200 ಮೀ. ನೀರು ಎತ್ತರಕ್ಕೆ ಚಿಮ್ಮಿದೆ.

ಧೈತ್ಯಕಾರದ ಸುಂಟರಗಾಳಿ

By

Published : Aug 1, 2019, 9:31 PM IST

ಉಡುಪಿ: ಇಂದು ಬೆಳ್ಳಂಬೆಳಗ್ಗೆ ದಿಢೀರ್​​ ಅಂತಾ ಎದ್ದ ಸುಂಟರಗಾಳಿಗೆ ನೀರು 200 ಮೀಟರ್​​ ಎತ್ತರಕ್ಕೆ ಚಿಮ್ಮಿದಂತಹ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೊಪ್ಪಳ ಮಂಚಕಲ್ಲು ಬಳಿ ನಡೆದಿದೆ.

ಈ ದೃಶ್ಯ ನೋಡಿದ ಕಾರ್ಕಳದ ಜನತೆ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಇಲ್ಲಿನ ಸುಲೋಚನ ನಾಯಕ್​ ಮನೆ ಹಾಗೂ ದನದ ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದೆ. ಮಾಲಿಂಗ ಶೆಟ್ಟಿಯವರ ಅಡಿಕೆ ತೋಟ ಹಾಗೂ ಬೃಹತ್ ಗಾತ್ರದ ಮರ ನೆಲಕಚ್ಚಿವೆ. ಕುಂಬ್ರಿ ಪದಗಳಲ್ಲಿ ಬೀಸಿದ ಸುಂಟರಗಾಳಿಗೆ ಗದ್ದೆಗಳ ನೀರು ಸುಮಾರು 200 ಮೀಟರ್ ಮೇಲಕ್ಕೆ ಎದ್ದಿದೆ.

ಭಾರೀ ಸುಂಟರಗಾಳಿ

ಈ ರೀತಿ ಸುಂಟರಗಾಳಿ ಕಾರ್ಕಳದ ಇತಿಹಾಸದಲ್ಲೇ ಮೊದಲ ಬಾರಿಗೆ ಎಂದು ಹೇಳಲಾಗಿದೆ. ಸುಂಟರಗಾಳಿಯಿಂದ ಸುಮಾರು 20 ಲಕ್ಷದವರೆಗೆ ಹಾನಿ ಉಂಟಾಗಿದೆ. ಈ ಸಂದರ್ಭದಲ್ಲಿ ಕಾರ್ಕಳ ದಂಡಾಧಿಕಾರಿ ಪುರಂದರ ಹೆಗಡೆ ಹಾಗೂ ಪುರಸಭೆ ಅಧಿಕಾರಿ ಮಾಬೆಲ್ ಡಿಸೋಜ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details