ಕರ್ನಾಟಕ

karnataka

ETV Bharat / state

ಭೂಮಿಗೆ ಹತ್ತಿರವಾಗಲಿರುವ ಶನಿಗ್ರಹ: ನಭೋಮಂಡಲದಲ್ಲಿ ಕೌತುಕ - ಭೂಮಿಗೆ ಹತ್ತಿರವಾಗಲಿರುವ ಶನಿಗ್ರಹ

ಇಂದು ನಭೋಮಂಡಲದಲ್ಲಿ ಕೌತುಕ ನಡೆಯಲಿದೆ. ಶನಿಗ್ರಹ ಭೂಮಿಯ ಅತೀ ಸಮೀಪಕ್ಕೆ ಬರಲಿದೆ. ಶನಿ ಗ್ರಹ ಕೆಲ ದಿನಗಳ ಕಾಲ ರಾತ್ರಿಯಿಡೀ ಕಾಣಲಿದೆ.

ಶನಿಗ್ರಹ
Saturn

By

Published : Aug 2, 2021, 8:10 PM IST

ಉಡುಪಿ:ವರ್ಷಕ್ಕೊಮ್ಮೆ ನಡೆಯುವ ಒಪೋಸಿಷನ್​​ನಿಂದ ಶನಿ ಗ್ರಹ ಕೆಲವು ದಿನಗಳ ಕಾಲ ರಾತ್ರಿ ಇಡೀ ಕಾಣುತ್ತದೆ ಎಂದು ಉಡುಪಿಯ ಖಗೋಳ ಶಾಸ್ತ್ರಜ್ಞ ಡಾ.ಎಪಿ ಭಟ್ ಹೇಳಿದ್ದಾರೆ.

ಶನಿಗ್ರಹ ಭೂಮಿಯಿಂದ ಸುಮಾರು 133 ಕೋಟಿ ಕಿಮೀ ದೂರದಲ್ಲಿದೆ. ಆದರೆ, ಇಂದು 15 ಕೋಟಿ ಕಿಮೀ ಭೂಮಿಗೆ ಹತ್ತಿರ ಬರುತ್ತಿದೆ. ಹಾಗಾಗಿ ಶನಿ ಗ್ರಹ ಬಹಳ ದೊಡ್ಡದಾಗಿ ಕಾಣುತ್ತದೆ. ದೂರದರ್ಶಕದಲ್ಲಿ ಶನಿಯ ಬಳೆ ನೋಡಲು ಬಲು ಚೆಂದವಾಗಿ ಕಾಣಿಸುತ್ತದೆ ಎಂದರು.

ಭೂಮಿಗೆ ಹತ್ತಿರವಾಗಲಿರುವ ಶನಿಗ್ರಹ

ಶನಿಗ್ರಹ ಭೂಮಿಯ ಅತೀ ಸಮೀಪಕ್ಕೆ ಬರಲಿದೆ. ನಭೋಮಂಡಲದ ಈ ವಿದ್ಯಮಾನ ಕಾಣಲು ಖಗೋಳವಿಜ್ಞಾನಿಗಳು ಕಾತುರರಾಗಿದ್ದಾರೆ. ಆದರೆ, ಭಾರತದಲ್ಲಿ ಹಗಲು ಆಗಿದ್ದರಿಂದ ಇದು ಗೋಚರ ಆಗಲ್ಲ ಎಂದು ಭಾರತದ ವಿಜ್ಞಾನಿಗಳು, ಖಗೋಳ ವೀಕ್ಷಕ ಆಸಕ್ತರು ನಿರಾಸೆ ವ್ಯಕ್ತಪಡಿಸಿದ್ದಾರೆ.

ಪ್ರಕೃತಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಸಂಭವಿಸಲ್ಲ. ಜನಕ್ಕೆ ಆತಂಕ ಬೇಡ. ಇದೊಂದು ಸೌರಮಂಡಲದ ಪ್ರಕ್ರಿಯೆಯಾಗಿದೆ. ಇನ್ನೂ ಕೆಲದಿನಗಳ ಕಾಲ ಖಗೋಳ ವೀಕ್ಷಣೆ ಮಾಡಿ ಶನಿಯ ಸೌಂದರ್ಯ ಕಣ್ತುಂಬಿಕೊಳ್ಳಿ ಎಂದರು.

ABOUT THE AUTHOR

...view details