ಉಡುಪಿ: ಜಿಲ್ಲೆಯಲ್ಲಿ ಇಂದು 5 ಜನರಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ.
ಉಡುಪಿಯಲ್ಲಿ ಇಂದು ಐವರಿಗೆ ಕೊರೊನಾ ದೃಢ: ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆ - ಉಡುಪಿ ಲೆಟೆಸ್ಟ್ ಕೊರೊನಾ ಅಪ್ಡೇಟ್
ಉಡುಪಿಯಲ್ಲಿ ಇಂದು 5 ಜನರಿಗೆ ಕೊರೊನಾ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆಯಾಗಿದೆ ಎಂದು ಡಿಹೆಚ್ಒ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ.
![ಉಡುಪಿಯಲ್ಲಿ ಇಂದು ಐವರಿಗೆ ಕೊರೊನಾ ದೃಢ: ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆ five people Corona confirm in Udupi](https://etvbharatimages.akamaized.net/etvbharat/prod-images/768-512-7331173-459-7331173-1590326850384.jpg)
ಉಡುಪಿಯಲ್ಲಿ ಇಂದು ಐವರಿಗೆ ಕೊರೊನಾ ದೃಢ
ಕ್ವಾರಂಟೈನ್ನಲ್ಲಿದ್ದ ದುಬೈನಿಂದ ಬಂದ 44 ವರ್ಷದ ಮಹಿಳೆ, ತೆಲಂಗಾಣದ 26 ವರ್ಷದ ಪುರುಷ ಹಾಗೂ ಮಹಾರಾಷ್ಟ್ರದಿಂದ ಬಂದ ಮೂವರಿಗೆ ಸೋಂಕು ತಗುಲಿದೆ.
ಇದರಲ್ಲಿ ಎರಡು ವರ್ಷದ ಗಂಡು ಮಗುವಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಉಡುಪಿ ಡಿಹೆಚ್ಒ ಡಾ. ಸುಧೀರ್ ಚಂದ್ರ ಸೂಡಾ ಮಾಹಿತಿ ನೀಡಿದ್ದಾರೆ.