ಕರ್ನಾಟಕ

karnataka

ETV Bharat / state

ಉಡುಪಿಯಲ್ಲಿ ಒಂದೇ ದಿನ 27 ಕೊರೊನಾ ಪ್ರಕರಣಗಳು ಪತ್ತೆ..! - ಕೇರಳದ ಒಬ್ಬರಿಗೆ ಕೋವಿಡ್-19

ಉಡುಪಿಯಲ್ಲಿ ಇಂದು ಒಂದೇ ದಿನದಲ್ಲಿ‌ 27 ಕೋವಿಡ್​-19 ಪ್ರಕರಣಗಳು ಪತ್ತೆಯಾಗಿವೆ. ಈ ಪ್ರಕರಣಗಳಲ್ಲಿ ಮಹಾರಾಷ್ಟ್ರದಿಂದ ಬಂದವರೇ 24 ಮಂದಿ ಸೋಂಕಿತರಿದ್ದಾರೆ.

ಕೊರೊನಾ
ಕೊರೊನಾ

By

Published : May 28, 2020, 7:43 PM IST

ಉಡುಪಿ: ಉಡುಪಿಯಲ್ಲಿ ಇಂದು ಒಂದೇ ದಿನದಲ್ಲಿ‌ 27 ಕೋವಿಡ್​-19 ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಕೊರೊನಾ ಪೀಡಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್​​ತಿಳಿಸಿದ್ದಾರೆ.

ಈ ಕುರಿತು ವಿವರಿಸಿದ ಅವರು, ಈ ಪ್ರಕರಣಗಳಲ್ಲಿ ಮಹಾರಾಷ್ಟ್ರದಿಂದ ಬಂದವರೇ 24 ಮಂದಿ ಸೋಂಕಿತರಿದ್ದಾರೆ. ಉಳಿದಂತೆ ತೆಲಂಗಾಣ 2, ಕೇರಳದ ಒಬ್ಬರಿಗೆ ಕೋವಿಡ್-19 ಪತ್ತೆಯಾಗಿದೆ. ಇದರಲ್ಲಿ 18 ಪುರುಷರು, 8 ಮಹಿಳೆಯರು ಒಂದು ಹೆಣ್ಣು ಮಗುವಿನಲ್ಲಿ ಸೋಂಕು ಧೃಡಗೊಂಡಿದೆ. ಈ ಮೂಲಕ ಕೊರೊನಾ ಪೀಡಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ ಎಂದರು.

ಜಿಲ್ಲಾಧಿಕಾರಿ ಜಿ. ಜಗದೀಶ್​​

ಹೊರ ರಾಜ್ಯದವರಿಗೆ ಏಳು ದಿನ ಮಾತ್ರ ಸಾಂಸ್ಥಿಕ ಕ್ವಾರಂಟೈನ್:

ಹೊರ ರಾಜ್ಯದವರಿಗೆ ಏಳು ದಿನ ಮಾತ್ರ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದೆ. ಬಳಿಕ ಏಳು ದಿನ ಅವರೇ ಹೋಮ್ ಕ್ವಾರಂಟೈನ್ ಆಗಬೇಕು. ಹದಿನಾಲ್ಕು ದಿನಗಳ ಕಾಲ ಬಹಳ ಎಚ್ಚರಿಕೆಯಿಂದ ಇರಬೇಕು. ಹೋಮ್ ಕ್ವಾರಂಟೈನ್ ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಲೇಬೇಕು ಕ್ವಾರಂಟೈನ್ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಹೇಳಿದ್ದಾರೆ.

ABOUT THE AUTHOR

...view details