ಕರ್ನಾಟಕ

karnataka

ETV Bharat / state

ಕೊರೊನಾ ಗೆಲ್ಲಲು ಮಾನಸಿಕ ತಜ್ಞರಿಂದ ಟಿಪ್ಸ್ ... - corona

ಕೊರೊನಾದಿಂದ ಗುಣಮುಖರಾಗಲು ಮಾನಸಿಕ‌ ತಜ್ಞರಾದ ಡಾ.ಪಿ.ವಿ. ಭಂಡಾರಿಯವರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

Dr. P.V Bhandari
ಡಾ.ಪಿ.ವಿ. ಭಂಡಾರಿ

By

Published : Sep 4, 2020, 10:15 PM IST

ಉಡುಪಿ:ಕೋವಿಡ್ ಅಂದ್ರೆ ಸಾವು, ಹೋಮ್ ಕ್ವಾರಂಟೈನ್, ಐಸೋಲೇಶನ್ ಹೀಗೆ ಹಲವಾರು ಭಯದ ವಾತಾವರಣ ಜಗತ್ತಲ್ಲೇ ಬಂದು ಆವರಿಸಿಬಿಟ್ಟಿದೆ ಅದಕ್ಕೆ ಉಡುಪಿ ಜಿಲ್ಲೆ ಕೂಡಾ ಹೊರತಾಗಿಲ್ಲ. ಕೋವಿಡ್​ಗೆ ತುತ್ತಾಗಿ ಯಶಸ್ವಿಯಾಗಿ ಹೊರಬಂದು ಕೋವಿಡ್ ಮುಕ್ತರಾದವರ ಕಥೆಯ ಜೊತೆಗೆ ಭರವಸೆಯ ಮಾತು ಇಲ್ಲಿದೆ ನೋಡಿ...

ಉಡುಪಿ ಜಿಲ್ಲೆಯಲ್ಲಿ ಮಧ್ಯಮ ವರ್ಗದಿಂದ ಹಿಡಿದು ಅತೀ ಶ್ರೀಮಂತರನ್ನು ಕೋವಿಡ್​ ಮುಟ್ಟಿ ಹೋಗಿದೆ. ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು ಶಾಸಕರವರೆಗೂ ಕೋವಿಡ್ ದೃಢಪಟ್ಟಿದ್ದು, ಎಲ್ಲರೂ ಕೂಡಾ ಕೋವಿಡ್ ನಿಂದ ಮುಕ್ತರಾಗಿ ಹೊರಗೆ ಬಂದಿದ್ದಾರೆ. ಕೋವಿಡ್ ಪೀಡಿತರನ್ನು ದೂರ ಇಡದೇ ಅವರಿಗೆ ಭರವಸೆ ತುಂಬಿ ಆತ್ಮವಿಶ್ವಾಸದಿಂದ ಕಾಣಿ ಅನ್ನೋದೆ ಕೋವಿಡ್ ಪೀಡಿತರ ಕಳಕಳಿಯಾಗಿದೆ.

ಕೊರೊನಾ ಗೆಲ್ಲಲು ಮಾನಸಿಕ ತಜ್ಞರಿಂದ ಟಿಪ್ಸ್

ಇನ್ನು ಇದಕ್ಕೆ ಮಾನಸಿಕ‌ ತಜ್ಞರೇ ಕೆಲವೊಂದು ಟಿಪ್ಸ್​ಗಳನ್ನು ನೀಡಿದ್ದಾರೆ. ರೋಗ ನಿರೋಧಕ ಶಕ್ತಿ ಹಾಗೂ ಮನಸ್ಸಿಗೆ ಧೈರ್ಯ ತುಂಬುವ ಲಕ್ಷಣಗಳನ್ನು ನೀವು ಬೆಳೆಸಿಕೊಳ್ಳುವುದು ಉತ್ತಮ ಯಾವುದೇ ರೀತಿಯ ನೆಗಟಿವ್ ಯೋಚನೆ ಮಾಡದಂತೆ ತಿಳಿಸಿದ್ದಾರೆ. ಇದೊಂದು ಮಾರಾಣಾಂತಿಕ‌ ಕಾಯಿಲೆ ಅಲ್ಲ ಹಾಗಾಗಿ ಮನೋಸ್ಥೈರ್ಯ ಬೆಳೆಸಿಕೊಂಡರೆ ಈ ಕಾಯಿಲೆ ಗೆಲ್ಲಬಹುದಾಗಿದೆ ಎಂದು ಉಡುಪಿಯ ಖ್ಯಾತ ಮಾನಸಿಕ ತಜ್ಞ ಡಾ.ಪಿ.ವಿ. ಭಂಡಾರಿ ತಿಳಿಸಿದ್ದಾರೆ.

ಒಟ್ಟಾರೆ ಮನುಷ್ಯನ ಮಾನಸಿಕ ಗುಣವೇ ಎಂತಹ ಕಾಯಿಲೆಯನ್ನು ಕೂಡಾ ಗುಣಪಡಿಸಬಲ್ಲದು.‌ ಅದೇ ರೀತಿ ಕೊರೊನಾವನ್ನು ಕೂಡಾ ಮನೋಬಲದಿಂದ ಗುಣಪಡಿಸಬಹುದಾಗಿದೆ ಎಂದಿದ್ದಾರೆ.

ABOUT THE AUTHOR

...view details