ಉಡುಪಿ :ಇಂದು ಜಿಲ್ಲೆಯಲ್ಲಿ ಕೊರೊನಾಗೆ ಮೂವರು ಬಲಿಯಾಗಿದ್ದಾರೆ. 88 ವರ್ಷದ ವೃದ್ಧ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ 20 ವರ್ಷದ ಯುವತಿ ಸಾವನ್ನಪ್ಪಿದ್ದಾರೆ.
ಉಡುಪಿಯಲ್ಲಿ ಕೊರೊನಾಗೆ ಮೂವರು ಬಲಿ - Udupi corona latest news
ಜಿಲ್ಲೆಯಲ್ಲಿ ಕೊರೊನಾ ಸೋಂಕು ಇವತ್ತು ಮೂವರನ್ನ ಬಲಿಪಡೆದಿದೆ..
![ಉಡುಪಿಯಲ್ಲಿ ಕೊರೊನಾಗೆ ಮೂವರು ಬಲಿ Udupi](https://etvbharatimages.akamaized.net/etvbharat/prod-images/768-512-02:10:38:1595148038-kn-udp-03-19-karona-3death-7202200-av-19072020140336-1907f-1595147616-1100.jpeg)
Udupi
ಈಕೆ ಕಾಪು ತಾಲೂಕಿನ ಉದ್ಯಾವರ ನಿವಾಸಿಯಾಗಿದ್ದಾಳೆ. ಗಂಟಲು ದ್ರವದ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿತ್ತು.
ಕಾರ್ಕಳ ತಾಲೂಕು ಸಾಣೂರಿನ 65 ವರ್ಷದ ರೋಗಿ ಸಾವನ್ನಪ್ಪಿದ್ದು, ಉಸಿರಾಟ, ಲಂಗ್ಸ್ ಮತ್ತು ಹೃದಯದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.