ಕಟಪಾಡಿ:ಸುಳ್ಳು ದಾಖಲೆ ಪತ್ರ ನೀಡಿ ಮೂರನೇ ಮದುವೆಯಾಗಿ ವಂಚಿಸಿ ಕಳೆದ ಹಲವು ವರ್ಷಗಳಿಂದ ನಾಪತ್ತೆಯಾಗಿದ್ದ ಆರೋಪಿಯನ್ನು ಕಾಪು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮೂಳೂರು ನಿವಾಸಿ ಮೊಹಮ್ಮದ್ ರಫೀಕ್ (44) ಬಂಧಿತ ಆರೋಪಿ. ಈತ ಮೂರನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭ ಜಮಾತ್ ವ್ಯಾಪ್ತಿಯ ಮಸೀದಿಯ ಲೆಟರ್‌ಹೆಡ್ ದುರುಪಯೋಗ ಮಾಡಿಕೊಂಡಿದ್ದ. ಈ ಸಂಬಂಧ 2000ನೇ ಇಸವಿಯಲ್ಲಿ ಉಡುಪಿ ಜಿಲ್ಲೆಯ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.