ಕರ್ನಾಟಕ

karnataka

ETV Bharat / state

ಕಬ್ಬಿಣದ ಹುಂಡಿ ಒಡೆಯಲು ವಿಫಲ ಯತ್ನ, ಬೆಳ್ಳಿ ಪಾದುಕೆ ಕದ್ದ ಕಳ್ಳರು - udupi crime news

ನಿತ್ಯ ಪೂಜೆಗೆ ಬರುವಂತೆ ಗುರುವಾರ ಬೆಳಗ್ಗೆ ಅರ್ಚಕರು ಮಂದರಕ್ಕೆ ಬಂದಿದ್ದಾರೆ. ಆಗ ಬಾಗಿಲು ಮುರಿದು ದೋಚಿರುವ ಘಟನೆ ಬೆಳಕಿಗೆ ಬಂದಿದೆ..

Theft of silver things in udupi
ಬೆಳ್ಳಿ ಪಾದುಕೆ ಕದ್ದ ಕಳ್ಳರು

By

Published : Sep 9, 2020, 5:26 PM IST

ಉಡುಪಿ :ಕಾಪು ತಾಲೂಕಿನ ಎರ್ಮಾಳು ತೆಂಕ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಬೆಳ್ಳಿ ಪಾದುಕೆ ಕಳ್ಳತನವಾಗಿದೆ.

ಬೆಳ್ಳಿ ಪಾದುಕೆ ಕದ್ದ ಕಳ್ಳರು

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಮಂದಿರದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು, ಸುಮಾರು ಐವತ್ತು ಸಾವಿರ ಬೆಲೆ ಬಾಳುವ ಬೆಳ್ಳಿಯ ಪಾದುಕೆ ಕಳ್ಳತನ ಮಾಡಿರುವ ಘಟನೆ ಬುಧವಾರ ಮುಂಜಾನೆ ಬೆಳಕಿಗೆ ಬಂದಿದೆ.

ನಿತ್ಯ ಪೂಜೆಗೆ ಬರುವಂತೆ ಗುರುವಾರ ಬೆಳಗ್ಗೆ ಅರ್ಚಕರು ಮಂದರಕ್ಕೆ ಬಂದಿದ್ದಾರೆ. ಆಗ ಬಾಗಿಲು ಮುರಿದು ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಬೆಳ್ಳಿ ಪಾದುಕೆ ಕದ್ದ ಕಳ್ಳರು

ದೊಡ್ಡದಾದ ಕಬ್ಬಿಣದ ಕಾಣಿಕೆ ಹುಂಡಿ ಒಡೆಯಲು ವಿಫಲ ಯತ್ನ ನಡೆಸಿದ್ದು, ಅಸಾಧ್ಯವಾದಾಗ ಗರ್ಭ ಗುಡಿಯೊಳಗಿದ್ದ ಪಾದುಕೆ ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ABOUT THE AUTHOR

...view details