ಕರ್ನಾಟಕ

karnataka

ETV Bharat / state

ಉಡುಪಿಯಲ್ಲಿ ಒಂದೇ ದಿನ 2 ದೇವಸ್ಥಾನಗಳಲ್ಲಿ ಕಳ್ಳರ ಕೈಚಳಕ - ಎರಡು ದೇವಸ್ಥಾನದಲ್ಲಿ ಕಳ್ಳತನ

ಗಂಗೊಳ್ಳಿ ವ್ಯಾಪ್ತಿಯ ಪಡುಕೋಣೆಯ ಶ್ರೀರಾಮ ಮಂದಿರದಲ್ಲಿ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯಲ್ಲಿನ ದೇವಸ್ಥಾನದಲ್ಲಿ ಕಳ್ಳತನವಾಗಿದೆ.

Theft in the temple
ಉಡುಪಿಯಲ್ಲಿ ಒಂದೇ ದಿನ ಎರಡು ದೇವಸ್ಥಾನದಲ್ಲಿ ಕಳ್ಳತನ

By

Published : Jul 15, 2020, 8:37 AM IST

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನಲ್ಲಿ ಒಂದೇ ರಾತ್ರಿ ಎರಡು ದೇವಾಲಯಗಳಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.

ಉಡುಪಿಯಲ್ಲಿ ಒಂದೇ ದಿನ ಎರಡು ದೇವಸ್ಥಾನದಲ್ಲಿ ಕಳ್ಳರ ಕೈಚಳಕ

ಗಂಗೊಳ್ಳಿ ವ್ಯಾಪ್ತಿಯ ಪಡುಕೋಣೆಯ ಶ್ರೀರಾಮ ಮಂದಿರದಲ್ಲಿ ಕಳ್ಳತನ ಮಾಡಿದ್ದಾರೆ. ತಡರಾತ್ರಿ ಮಂದಿರಕ್ಕೆ ನುಗ್ಗಿದ ಕಳ್ಳರು, ಎರಡೂವರೆ ಕೆ.ಜಿ.ಗೂ ಅಧಿಕ ತೂಕದ ಬೆಳ್ಳಿ ಪ್ರಭಾವಳಿ ಕಳವು ಮಾಡಿದ್ದಾರೆ. ಇದರ ಮೌಲ್ಯ ಸುಮಾರು 1.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಮಂದಿರದ ಬಾಗಿಲು ಚಿಲಕ ತುಂಡರಿಸಿ ಒಳ ಪ್ರವೇಶಿಸಿದ್ದ ಕಳ್ಳರು ಕೃತ್ಯ ಎಸಗಿದ್ದಾರೆ. ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಬೈಂದೂರು ತಾಲೂಕು ವ್ಯಾಪ್ತಿಯಲ್ಲಿ ಮತ್ತೊಂದು ದೇವಸ್ಥಾನದಲ್ಲೂ ಕಳ್ಳತನವಾಗಿದೆ. ಕಟ್ ಬೇಲ್ತೂರಿನ ಶ್ರೀ ಭದ್ರ ಮಹಾಕಾಳಿ ದೇವಸ್ಥಾನದಲ್ಲಿ ಕಳ್ಳನದ ಕರಾಮತ್ತು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಬೆಳಗಿನ ಜಾವ 3.15ರ ಸುಮಾರಿಗೆ ಕಳ್ಳತನವಾಗಿದೆ. ಕಳ್ಳನಿಗಾಗಿ ಶೋಧ ಮುಂದುವರಿದಿದ್ದು, ಬೈಂದೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details