ಉಡುಪಿ:ನಗರದಲ್ಲಿ ತರಕಾರಿ, ಹಣ್ಣಿನ ತೋಟ ನಿರ್ಮಿಸಬೇಕೆಂಬ ಮನಸ್ಸಿದ್ದವರಿಗೆ ಮೊದಲು ಎದುರಾಗುವ ಸಮಸ್ಯೆ ಸ್ಥಳಾವಕಾಶದ್ದು. ಈ ಸಮಸ್ಯೆ ನೀಗಿಸಲು ಇತ್ತೀಚಿನ ದಿನಗಳಲ್ಲಿ ಉಡುಪಿಯ ಜನರು ತಾರಸಿ ಕೃಷಿಯತ್ತ ಒಲವು ತೋರುತ್ತಿದ್ದಾರೆ.
ತೊಂಡೆ, ಬೆಂಡೆ, ಹಲಸಂದೆ ಹೀಗೆ.. ಬಗೆ-ಬಗೆಯ ತರಕಾರಿ, ಚುಕ್ಕು, ಜಮನೇರಳು, ಲಿಂಬೆ ಸೇರಿದಂತೆ ವಿವಧ ಹಣ್ಣುಗಳನ್ನು ಮನೆಯ ತಾರಸಿ ಮೇಲೆ ಬೆಳೆಯಲಾಗುತ್ತಿದೆ. ನಗರದ ಜೋಸೆಫ್ ಎನ್ನುವವರು ಈ ಕೃಷಿಯಲ್ಲಿ ಪರಿಣತರಾಗಿದ್ದಾರೆ. ಹಲವು ವರ್ಷಗಳಿಂದ ಮನೆಯ ತಾರಸಿ ಮೇಲೆ ವಿವಿಧ ವಿವಿಧ ತರಕಾರಿ ಹಾಗೂ ಹಣ್ಣಗಳನ್ನು ಇವರು ಬೆಳೆಯುತ್ತಿದ್ದಾರೆ. ಸಾವಯವವಾಗಿ ತರಕಾರಿ ಹಣ್ಣಿನ ಕೃಷಿ ಮಾಡುತ್ತಿದ್ದು, ತಾರಸಿ ಕೃಷಿಯಿಂದ ಖರ್ಚು ಕಡಿಮೆ, ಮನಸ್ಸಿಗೂ ಖುಷಿ ಇದೆ ಅಂತಾರೆ. ಇದ್ರ ಜೊತೆಗೆ ಕಾಲೇಜು ವಿದ್ಯಾರ್ಥಿಗಳು, ತಾರಸಿ ಕೃಷಿಯಲ್ಲಿ ಆಸಕ್ತಿ ಇರುವವರಿಗೆ ಮಾಹಿತಿ ನೀಡುತ್ತಿದ್ದಾರೆ.