ಕರ್ನಾಟಕ

karnataka

ETV Bharat / state

ಮನೆಯೇ ಮಿನಿ ಮ್ಯೂಸಿಯಂ: ಇಲ್ಲಿವೆ 2,500ಕ್ಕೂ ಹೆಚ್ಚು ಪ್ರಾಚ್ಯ ವಸ್ತುಗಳ ಸಂಗ್ರಹ

ಬಹುಮಹಡಿಯ ಮನೆಗಳಲ್ಲಿ ಆಧುನಿಕ ವಸ್ತುಗಳು ತುಂಬಿರುವುದು ಸಹಜ. ಆದ್ರೆ, ಇಲ್ಲೊಂದು ಆಧುನಿಕ ಶೈಲಿಯ ಮನೆಯಲ್ಲಿ ಪ್ರಾಚ್ಯ ವಸ್ತುಗಳೇ ತುಂಬಿಕೊಂಡಿವೆ. ಈ ಮನೆಯೊಳಗೊಮ್ಮೆ ಸುತ್ತಾಡಿದ್ರೆ ಸಾಕು ಮಿನಿ ಮ್ಯೂಸಿಯಂ ನೋಡಿದಂತಾಗುತ್ತೆ.

By

Published : Dec 9, 2021, 2:01 PM IST

Updated : Dec 9, 2021, 6:54 PM IST

the man who made the house a museum of antiques in Barkur, Udupi District
ಮನೆಯನ್ನೇ ಮಿನಿ ಮ್ಯೂಸಿಯಂ ಮಾಡಿದ; ಇಲ್ಲಿವೆ 2,500ಕ್ಕೂ ಅಧಿಕ ಪ್ರಾಚ್ಯ ವಸ್ತುಗಳು

ಉಡುಪಿ:ಜಿಲ್ಲಾ ಕೇಂದ್ರದಿಂದ 17 ಕಿಲೋಮೀಟರ್ ದೂರದಲ್ಲಿರುವ ಬಾರ್ಕೂರಿನಲ್ಲಿ ವೆಂಕಟರಮಣ ಭಂಡಾರ್ಕರ್ ಎಂಬುವರು ತಮ್ಮ ಮನೆಯನ್ನು ಮಿನಿ ಮ್ಯೂಸಿಯಂನಂತೆ ಪರಿವರ್ತಿಸಿದ್ದು, ಸುಮಾರು 2,500ಕ್ಕೂ ಅಧಿಕ ಹಳೆಯ ಕಾಲದ ವಸ್ತುಗಳನ್ನು ಸಂಗ್ರಹಿಸಿದ್ದಾರೆ.

ಮನೆಯೇ ಮಿನಿ ಮ್ಯೂಸಿಯಂ: ಇಲ್ಲಿವೆ 2,500ಕ್ಕೂ ಹೆಚ್ಚು ಪ್ರಾಚ್ಯ ವಸ್ತುಗಳ ಸಂಗ್ರಹ

ಹಳೆ ಕಾಲದ ತಾಮ್ರದ ಪಾತ್ರೆಗಳು, ಗಡಿಯಾರ, ರಾಜರು ಬಳಸುತ್ತಿದ್ದ ದೇವರ ವಿಗ್ರಹಗಳು, ಪೂಜೆಯ ಬಗೆ ಬಗೆಯ ವಸ್ತುಗಳಿವೆ. ಪುರಾತನ ಕಾಲದಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಭಂಡಾರ್ಕಾರ್ ಇಂಥದ್ದೊಂದು ಅದ್ಭುತ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಎಲ್ಲಾದರೂ ಹಳೆದ ವಸ್ತುಗಳು ಕಂಡುಬಂದರೆ ಸಾಕು ಅದನ್ನು ಖರೀದಿಸಿ ಮನೆಯಲ್ಲಿ ಸಂಗ್ರಹಿಸುವ ಹವ್ಯಾಸ ಇವರದ್ದು. ಮನೆಯ ಪ್ರವೇಶ ದ್ವಾರದಿಂದ ಹಿಡಿದು ಚಾವಡಿ, ಪಡಸಾಲೆ, ಅಡುಗೆ ಮನೆ ಹಾಗೂ ಕೋಣೆಗಳಲ್ಲಿ ಅಚ್ಚುಕಟ್ಟಾಗಿ ಸುಂದರವಾಗಿ ವಸ್ತುಗಳನ್ನು ಜೋಡಿಸಿಟ್ಟಿದ್ದಾರೆ. ತನ್ನ ಪತ್ನಿ ಮತ್ತು ಮಕ್ಕಳ ಸಹಕಾರದಿಂದ ಸಂಗ್ರಹಾಲಯ ಸ್ವಚ್ಛವಾಗಿ, ಆಕರ್ಷಣೀಯವಾಗಿರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂದಿನ ಪೀಳಿಗೆಗೆ ಹಳೆಯ ವಸ್ತುಗಳ ಅಧ್ಯಯನಕ್ಕೆ ಅನುಕೂಲ ಮಾಡಿಕೊಡಲು ಭಂಡಾರ್ಕರ್ ನಿರ್ಮಿಸಿರುವ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿ ಗಣ್ಯರು ಕೊಡುಗೆ ನೀಡಿದ್ದಾರೆ.

ಇದನ್ನೂ ಓದಿ:Big Ghol Fish: ಉಡುಪಿ ಮೀನುಗಾರರ ಬಲೆಗೆ ಬಿದ್ದ ಅಪರೂಪದ ಬೃಹತ್​ ಆಕಾರದ ಗೋಳಿ ಮೀನು!

Last Updated : Dec 9, 2021, 6:54 PM IST

For All Latest Updates

TAGGED:

ABOUT THE AUTHOR

...view details