ಉಡುಪಿ: ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಜೇತರಿಕೆ ಕಾಣದ ಹಿನ್ನೆಲೆಯಲ್ಲಿ ಶ್ರೀಗಳ ಅಂತಿಮ ಆಸೆಯಂತೆ ಮಠಕ್ಕೆ ಕರೆದೊಯ್ಯಲಾಗಿದೆ.
ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಯಿಂದ ಪೇಜಾವರ ಮಠಕ್ಕೆ ವಿಶ್ವೇಶತೀರ್ಥರ ಸ್ಥಳಾಂತರ - Health news of Udupi Pajavar Sri
ಪೇಜಾವರ ವಿಶ್ವೇಶ ತೀರ್ಥ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಯಾವುದೇ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಅವರ ಆಸೆಯಂತೆ ಮಠಕ್ಕೆ ಬಿಗಿ ಭದ್ರತೆಯೊಂದಿಗೆ ಕರೆತರಲಾಗಿದೆ.
![ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ: ಆಸ್ಪತ್ರೆಯಿಂದ ಪೇಜಾವರ ಮಠಕ್ಕೆ ವಿಶ್ವೇಶತೀರ್ಥರ ಸ್ಥಳಾಂತರ the-health-of-pejavara-sri-serious-preparing-to-be-taken-to-the-monastery](https://etvbharatimages.akamaized.net/etvbharat/prod-images/768-512-5526383-thumbnail-3x2-sri.jpg)
ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹಾಗಾಗಿ ಯಾವುದೇ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸದ ಹಿನ್ನೆಲೆ ಶ್ರೀಗಳ ಆಸೆಯಂತೆ ಮಠಕ್ಕೆ ಕರೆತರಲಾಗಿದೆ. ಕೆ.ಎಂ.ಸಿ ಆಸ್ಪತ್ರೆಯಿಂದ 5 ಕಿಲೋ ಮೀಟರ್ ದೂರವಿರುವ ಪೇಜಾವರ ಮಠಕ್ಕೆ ಬಿಗಿ ಭದ್ರತೆಯೊಂದಿಗೆ ಕರೆತರಲಾಗಿದೆ. ಸ್ಥಳಕ್ಕೆ ಪೇಜಾವರ ಶ್ರೀಗಳ ಸಹೋದರ ರಘುರಾಮ ಆಚಾರ್ಯ ಆಗಮಿಸಿದ್ದಾರೆ.
ಇನ್ನು, ಶ್ರೀಗಳ ದರ್ಶನ ಸೇರಿದಂತೆ ಅಪಾರ ಪ್ರಮಾಣ ಭಕ್ತಗಣ ಬರುವ ಸಾಧ್ಯತೆ ಹೆಚ್ಚಾಗಿದ್ದು, ಸುಮಾರು 700 ಪೊಲೀಸ್ ಸಿಬ್ಬಂದಿ ನಿಯೋಜನೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಉಡುಪಿ ಎಸ್ ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ. ಆಸ್ಪತ್ರೆಗೆ ತಹಶಿಲ್ದಾರ್ ಪ್ರದೀಪ್ ಕುರುಡೇಕರ್ ಭೇಟಿ ನೀಡಿದ್ದಾರೆ.