ಉಡುಪಿ: ಬೆಕ್ಕನ್ನು ರಕ್ಷಿಸಿಲು ಬಾವಿಗೆ ಇಳಿದ ಯುವತಿಯೋರ್ವಳು ಮೇಲೆ ಬಾರಲಾಗದೇ ಬಾವಿಯೊಳಗೆ ಸಿಲುಕಿದ್ದ ಘಟನೆ ಜಿಲ್ಲೆಯ ದುರ್ಗಾ ಗ್ರಾಮದ ನಾರ್ಕಟ್ ಬಳಿ ಸಂಭವಿಸಿದೆ.
ಬೆಕ್ಕನ್ನು ರಕ್ಷಿಸಲು ಹೋಗಿ ಬಾವಿಯಲ್ಲಿ ಸಿಲುಕಿದ ಯುವತಿಯ ರಕ್ಷಣೆ - kannada news
ಬಾವಿಗೆ ಬಿದ್ದ ಬೆಕ್ಕನ್ನ ರಕ್ಷಿಸಿಲು ಹೋಗಿ ಯುವತಿಯೊಬ್ಬಳು ಬಾವಿಗೆ ಬಿದ್ದಿದ್ದು, ಮೇಲೆ ಬಾರಲಾಗದೆ ಸಿಲುಕಿದ್ದ ಘಟನೆ ನಡೆದಿದೆ.
ಬಾವಿಯಲ್ಲಿ ಬಿದ್ದ ಯುವತಿ ರಕ್ಷಣೆ
ಸ್ಥಳೀಯ ನಿವಾಸಿ ಕೃಪಾ ಎಂಬ 21 ವರ್ಷದ ಕಾಲೇಜು ವಿದ್ಯಾರ್ಥಿನಿ ತನ್ನ ಮನೆಯ ಬೆಕ್ಕು ಬಾವಿಗೆ ಬಿದ್ದಿದ್ದನ್ನು ರಕ್ಷಿಸಲು ಬಾವಿಗೆ ಇಳಿದಿದ್ದಳು. ನಂತರ ಮೇಲಕ್ಕೆ ಬರಲು ಸಾದ್ಯವಾಗದೇ ಬಾವಿಯಲ್ಲೇ ಸಿಲುಕಿಕೊಂಡಿದ್ದಳು. ಬಾವಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಯುವತಿಯನ್ನ ರಕ್ಷಿಸಿದ್ದಾರೆ.