ಕರ್ನಾಟಕ

karnataka

ETV Bharat / state

ಕಾರಿನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರ ಬಂಧನ - Udupi crime news

ಟವೇರಾ ಕಾರಿನಲ್ಲಿ ಮಾದಕ ವಸ್ತು ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

The arrest of two men for trying to sell ganja in a car
ಬಂಧಿತ ಆರೋಪಿಗಳು

By

Published : Oct 3, 2020, 6:36 PM IST

ಉಡುಪಿ:ಕಾರಿನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕಾಪು ಪೊಲೀಸರ ತಂಡ ಬಂಧಿಸಿದೆ. ಬಂಧಿತರನ್ನು ಕಕ್ಕುಂಜೆ ನಿವಾಸಿ ಮೊಹಮ್ಮದ್ ಆಲಿ (33) ಮತ್ತು ಮೂಡುಪೆರಂಪಳ್ಳಿ ನಿವಾಸಿ ಶ್ರೀಧರ (32) ಎಂದು ಗುರುತಿಸಲಾಗಿದೆ.

ಉದ್ಯಾವರ ಗ್ರಾಮದ ಜೈಹಿಂದ್ ಕಾಂಪ್ಲೇಕ್ಸ್ ಹತ್ತಿರ ಟವೇರಾ ಕಾರಿನಲ್ಲಿ ಮಾದಕ ವಸ್ತು ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲು ಯತ್ನಿಸುತ್ತಿರುವುದರ ಕುರಿತ ಖಚಿತ ಮಾಹಿತಿ ಇತ್ತು. ಕಾಪು ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಅವರು ಕಾಪು ಠಾಣಾ ಪಿಎಸ್​ಐ ರಾಜಶೇಖರ ಬಿ.ಸಾಗನೂರ್ ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳ ವಶದಲ್ಲಿದ್ದ ಸುಮಾರು 1 ಕೆ.ಜಿ. 161 ಗ್ರಾಂ ತೂಕದ ಗಾಂಜಾ, ಎರಡು ಮೊಬೈಲ್, 18,600 ರೂ. ನಗದು, ವೆಯಿಂಗ್ ಮೆಷಿನ್ ಮತ್ತು ಗಾಂಜಾ ಮಾರಾಟಕ್ಕೆ ಉಪಯೋಗಿಸುವ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕೃತ್ಯಕ್ಕೆ ಬಳಸಿದ ಕಾರನ್ನು ಕೂಡ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 2,24,600 ರೂ. ಆಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ABOUT THE AUTHOR

...view details