ಕರ್ನಾಟಕ

karnataka

ETV Bharat / state

ವೃದ್ಧೆ ಅತ್ಯಾಚಾರ ಮಾಡಿ, ಹಣ ದೊಚಿದ್ದ ಆರೋಪಿಗೆ ಕಠಿಣ ಶಿಕ್ಷೆ.. - The accused who raped and stole money punished

78 ವರ್ಷದ ವೃದ್ಧೆಯನ್ನು ಅತ್ಯಾಚಾರ ಮಾಡಿ ಹಣ ದೊಚಿದ್ದ ಆರೋಪಿಗೆ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

The accused who raped and stole money punished
ವೃದ್ಧೆಯನ್ನು ಅತ್ಯಾಚಾರ ಮಾಡಿ ಹಣ ದೊಚಿದ್ದ ಆರೋಪಿ

By

Published : Dec 2, 2022, 3:17 PM IST

ಉಡುಪಿ:78 ವರ್ಷದ ವೃದ್ಧೆಯನ್ನು ಅತ್ಯಾಚಾರ ಮಾಡಿ ಹಣ ದೋಚಿದ್ದ ಆರೋಪಿಗೆ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಕಠಿಣ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

ಶಿವಮೊಗ್ಗ ಮೂಲದ ಇರ್ಫಾನ್ ಅತ್ಯಾಚಾರ ನಡೆಸಿದ ಆರೋಪಿಯಾಗಿದ್ದು, ಗುಜರಿ ಮಾರಾಟ ಮಾಡಿ ಬದುಕುತ್ತಿದ್ದ ವೃದ್ದೆಯ ಮೇಲೆ ಅತ್ಯಾಚಾರವೆಸಗಿದ್ದ. ಜೂನ್ 5, 2017 ರಂದು ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪದಲ್ಲಿ ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಆರೋಪಿ ಇರ್ಫಾನ್​ಗೆ ಕಠಿಣ ಶಿಕ್ಷೆಯ ನೀಡಲಾಗಿದೆ.

ಉಡುಪಿ ತೆಂಕಪೇಟೆ ಪರಿಸರದ ನಿರ್ಜನ ಪರಿಸರದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ಭಾರಿ ಸುದ್ಧಿಯಾಗಿತ್ತು. ಇರ್ಫಾನ್​ ಎರಡು ತಿಂಗಳಕಾಲ ಉಡುಪಿಯ ಕೋಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ.

ಅಜ್ಜಿ ಗುಜರಿ ವ್ಯಾಪಾರ ಮಾಡಿ ಸಂಗ್ರಹಿಸಿದ್ದ 30,000 ದರೋಡೆ ಮಾಡಿದ್ದ ಈತನಿಗೆ ಅತ್ಯಾಚಾರ ಪ್ರಕರಣದಲ್ಲಿ 10 ವರ್ಷದ ಕಠಿಣ ಸಜೆ, ಐವತ್ತು ಸಾವಿರ ದಂಡ ವಿಧಿಸಿದ ನ್ಯಾಯಾಲಯ, ದರೋಡೆ ಪ್ರಕರಣದಲ್ಲಿ ಆರು ತಿಂಗಳ ಸಾದಾ ಶಿಕ್ಷೆ ಹಾಗೂ ಐದು ಸಾವಿರ ದಂಡದ ಹಾಕಿ ಆದೇಶ ಹೊರಡಿಸಿದೆ. ದಂಡದ ಮೊತ್ತವನ್ನು ಸಂತ್ರಸ್ತ ವೃದ್ಧೆಗೆ ನೀಡಲು ನ್ಯಾಯಾಲಯ ಸೂಚನೆ ನೀಡಿದೆ.

ಇದನ್ನೂ ಓದಿ:ಜೋಳದ ವ್ಯಾಪಾರಿ ಸೋಗಿನಲ್ಲಿ ಮನೆಗಳ್ಳತನ: ಆರೋಪಿ ಬಂಧನ

ABOUT THE AUTHOR

...view details