ಉಡುಪಿ: ಮಕರ ಸಂಕ್ರಮಣ ದಿನ ಹಿನ್ನೆಲೆ ಶ್ರೀಕೃಷ್ಣ, ಮುಖ್ಯಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ಕಾರ್ಯ ನಡೆಯಿತು.
ಕೃಷ್ಣಮಠದಲ್ಲಿ ಸಪ್ತೋತ್ಸವ ಸಂಪನ್ನ: ನೂರಾರು ಭಕ್ತರು ಭಾಗಿ - ಮಕರ ಸಂಕ್ರಮಣ ದಿನ
ಈ ತಿಂಗಳ ಒಂಭತ್ತರಂದು ಪ್ರಾರಂಭಗೊಂಡ ಸಪ್ತೋತ್ಸವದ ಕೊನೆಯ ದಿನವಾದ ನಿನ್ನೆ ಅದ್ಧೂರಿ ಸಂಭ್ರಮಾಚರಣೆ ಮಾಡಲಾಯಿತು.
ಮುಖ್ಯಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ಕಾರ್ಯ
ಈ ತಿಂಗಳ ಒಂಭತ್ತರಂದು ಪ್ರಾರಂಭಗೊಂಡ ಸಪ್ತೋತ್ಸವದ ಕೊನೆಯ ದಿನವಾದ ನಿನ್ನೆ ಅದ್ಧೂರಿ ಸಂಭ್ರಮಾಚರಣೆ ಮಾಡಲಾಯಿತು. ಉತ್ಸವದ ಮೊದಲ ದಿನ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಸುವರ್ಣ ಪಲ್ಲಕ್ಕಿಯಲ್ಲಿರಿಸಿ ಮಧ್ವ ಸರೋವರದಲ್ಲಿ ತೆಪ್ಪೋತ್ಸವ ನಡೆಸಲಾಗಿತ್ತು.
ಮಹಾಪೂಜೆ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರು, ಗರುಡ ರಥದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಗಳನ್ನು ಸ್ಥಾಪಿಸಿ ರಥೋತ್ಸವ ನೆರವೇರಿಸಲಾಯಿತು. ಸಪ್ತೋತ್ಸವದಂದು ಮೂರು ರಥಗಳನ್ನು ರಥಬೀದಿಯಲ್ಲಿ ಪ್ರದಕ್ಷಿಣೆ ಹಾಕಲಾಗುತ್ತದೆ.