ಉಡುಪಿ:ರಾಜ್ಯಾದ್ಯಂತ ಜೂನ್ 1ರಿಂದ ದೇವಸ್ಥಾನಗಳು ತೆರೆಯಲಿದ್ದು, ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮಾತ್ರ 15 ದಿನಗಳು ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಶ್ರೀ ಈಶಪ್ರಿಯ ಶ್ರೀಪಾದರು ಹೇಳಿದ್ದಾರೆ.
ಜೂ. 1ರಿಂದ ದೇವಾಲಯಗಳು ಓಪನ್: ಉಡುಪಿ ಶ್ರೀ ಕೃಷ್ಣ ಮಾತ್ರ ಇನ್ನೂ 15 ದಿನ ಲಾಕ್ - ಉಡುಪಿ ಶ್ರೀ ಕೃಷ್ಣ
ರಾಜ್ಯಾದ್ಯಂತ ಜೂನ್ 1ರಿಂದ ದೇವಸ್ಥಾನಗಳು ತೆರೆಯಲಿದ್ದು, ಉಡುಪಿಯ ಅಷ್ಟ ಮಠಗಳ ಆಳ್ವಿಕೆಯಲ್ಲಿರುವ ಶ್ರೀಕೃಷ್ಣಮಠದಲ್ಲಿ 15 ದಿನಗಳು ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶವಿಲ್ಲ ಎಂದು ಶ್ರೀ ಈಶಪ್ರಿಯ ಶ್ರೀಪಾದರು ಹೇಳಿದ್ದಾರೆ.
![ಜೂ. 1ರಿಂದ ದೇವಾಲಯಗಳು ಓಪನ್: ಉಡುಪಿ ಶ್ರೀ ಕೃಷ್ಣ ಮಾತ್ರ ಇನ್ನೂ 15 ದಿನ ಲಾಕ್ ಉಡುಪಿ](https://etvbharatimages.akamaized.net/etvbharat/prod-images/768-512-7390087-thumbnail-3x2-huhds---copy.jpg)
ರಾಜ್ಯ ಸೇರಿದಂತೆ ಉಡುಪಿಯ ಹಲವು ದೇವಸ್ಥಾನಗಳು ಜೂನ್ 1ರಿಂದ ತೆರೆಯಲಿವೆ. ಹೀಗಾಗಿ ಕೊಲ್ಲೂರು ದೇವಸ್ಥಾನವನ್ನು ಸ್ವಚ್ಛ ಮಾಡಲು ಮುಜರಾಯಿ ಇಲಾಖೆ ಸೂಚನೆ ನೀಡಿದೆ. ಶನಿವಾರ ಮತ್ತು ಭಾನುವಾರದಂದು ದೇವಸ್ಥಾನ ಸ್ವಚ್ಛತೆಗೆ ನಿರ್ಧಾರ ಮಾಡಲಾಗಿದೆ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಶ್ರೀಕೃಷ್ಣಮಠದಲ್ಲಿ 15ದಿನ ದೇವರ ದರ್ಶನಕ್ಕೆ ಅವಕಾಶ ಇಲ್ಲ ಎಂದು, ಪರ್ಯಾಯ ಅದಮಾರು ಮಠ ನಿರ್ಧಾರ ಮಾಡಿದೆ. ಮುಂದಿನ ಬೆಳವಣಿಗೆಗಳನ್ನು ನೋಡಿ ನಿರ್ಧಾರ ತೆಗೆದುಕೊಳ್ಳುವುದಾಗಿ ಶ್ರೀ ಈಶಪ್ರಿಯ ಶ್ರೀಪಾದರು ಹೇಳಿದ್ದಾರೆ. ಕನಕನ ಕಿಂಡಿಯ ಮೂಲಕ ದೇವರ ದರ್ಶನ ಮಾಡಬಹುದು. ಭಕ್ತರಿಗೆ ಮಠದ ಒಳಭಾಗಕ್ಕೆ ಪ್ರವೇಶ ಇರುವುದಿಲ್ಲ, ಸಂಪ್ರದಾಯದಂತೆ ಎಲ್ಲಾ ಪೂಜೆ ನಡೆಯಲಿದೆ. ಮಠದ ಸಿಬ್ಬಂದಿಗೆ ಮಾತ್ರ ಒಳ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ ಎಂದರು.