ಉಡುಪಿ: ಸೂಡಾ ಗ್ರಾಮದ ಕ್ರಷರ್‌ನಲ್ಲಿ ಅಳವಡಿಸಿದ ಸುಮಾರು ₹40 ಲಕ್ಷ ಮೌಲ್ಯದ ಯಂತ್ರೋಪಕರಣಗಳನ್ನು ಕಳ್ಳತನ ಮಾಡಿ ಗುಜರಿಗೆ ಮಾರಿದ್ದ ಪ್ರಕರಣದಲ್ಲಿ ಭಾಗಿಯಾದ ಆರೋಪದಡಿ ಶಿಕ್ಷಕ ಸೇರಿ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೈನ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
168-P1ರಲ್ಲಿ ಸುಮಾರು ಮೂರೂವರೆ ಎಕರೆ ಪ್ರದೇಶದ ಕ್ರಷರ್‌ನಲ್ಲಿ ಜೋಡಣೆಯಾಗಿದ್ದ ಯಂತ್ರೋಪಕರಣ ಫೆ.27ರಿಂದ ಏ.22ರ ಅವಧಿಯಲ್ಲಿ ಕಳ್ಳತನವಾಗಿದ್ದು, ಈ ಕುರಿತು ಮಾಲೀಕ ಸುರೇಶ್ ಶೆಟ್ಟಿ ಎಂಬುವರು ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದರು. ಪೊಲೀಸರು ನಡೆಸಿದ ತನಿಖೆಯಲ್ಲಿ ಸೂಡಾದ ಶಿಕ್ಷಕ ರಿತೇಶ್ ಶೆಟ್ಟಿ (50) ಹಾಗೂ ಚರಣ್ ನಾಯಕ್ (29) ಎಂಬವರು ಪ್ರಕರಣದ ಆರೋಪಿಗಳು ಎಂಬುದು ತಿಳಿದು ಬಂದಿದೆ.