ಉಡುಪಿ :ಡಿವೈನ್ ಪಾರ್ಕ್ ಟ್ರಸ್ಟ್ ಸಾಲಿಗ್ರಾಮ ಇವರ ವತಿಯಿಂದ ಜಿಲ್ಲೆಯ ಸಾಲಿಗ್ರಾಮದ ಯೋಗಬನದಲ್ಲಿ ಜಗತ್ತಿನ ಅತೀ ಎತ್ತರದ ವಿವೇಕಾನಂದರ ಪ್ರತಿಮೆ ತಲೆ ಎತ್ತಿದ್ದು, ಇದನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿ.ವೀರೇಂದ್ರ ಹೆಗ್ಗಡೆ ಅವರು ಫೆ.1ಕ್ಕೆ ಉದ್ಘಾಟಿಸಲಿದ್ದಾರೆ.
ಡಿವೈನ್ ಪಾರ್ಕ್ ಅಂಗಸಂಸ್ಥೆಯಾದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿ.ವೀರೇಂದ್ರ ಹೆಗ್ಗಡೆ ಅವರು ಫೆ.1ಕ್ಕೆ ಉದ್ಘಾಟಿಸಲಿ ಅದೇ ದಿನ ಜಗತ್ತಿನ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆ ಕೂಡ ಉದ್ಘಾಟನೆಗೊಳ್ಳಲಿದೆ.
ಈ ಪ್ರತಿಮೆ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು, 35 ಅಡಿ ಎತ್ತರವಿದೆ. ಇದಕ್ಕೆ ವಿಶೇಷವಾದ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು, ಹಸಿರು ಹುಲ್ಲು ಹಾಸಿನ ನಡುವೆ ಪ್ರತಿಮೆ ಕಂಗೊಳಿಸುತ್ತಿದೆ.
ಸರ್ವಕ್ಷೇಮ ಆಸ್ಪತ್ರೆಯ ವಿಶೇಷತೆಗಳು:ಇದು ಪ್ರಾಚೀನ ದೇಗುಲದ ವಾಸ್ತು ವಿನ್ಯಾಸವನ್ನು ಹೊಂದಿರುವ ಜಗತ್ತಿನ ಪ್ರಥಮ ಯೋಗ ಆಸ್ಪತ್ರೆಯಾಗಿದ್ದು, ಆಯುಷ್ ವಿಭಾಗದಲ್ಲಿ ದೇಶದ ಪ್ರಥಮ ಪರಿಸರ ಸ್ನೇಹಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವ್ಯವಸ್ಥೆ ಕೂಡ ಇಲ್ಲಿದೆ. ಕರಾವಳಿಯ ಪ್ರಾಚೀನ ಶೈಲಿಯಲ್ಲಿ ಇದು ನಿರ್ಮಾಣಗೊಂಡಿದ್ದು, ಪ್ರಕೃತಿ, ಯೋಗ, ಆಹಾರ, ಅಧ್ಯಾತ್ಮ, ಯೋಗದ ಮಹಿಮೆಯನ್ನು ಇಲ್ಲಿ ತಿಳಿಸಿಕೊಡಲಾಗುತ್ತದೆ.