ಕರ್ನಾಟಕ

karnataka

ETV Bharat / state

ಉಡುಪಿಯಲ್ಲಿ ಕುಕ್ಕರ್​ ಸ್ಫೋಟದ ಶಂಕಿತ ಉಗ್ರ ಶಾರಿಕ್ ಜಾಡು.. ಪೊಲೀಸರಿಂದ ತೀವ್ರ ತನಿಖೆ - ಕೃಷ್ಣ ಮಠಕ್ಕೆ ಶಾರಿಕ್

ಮಂಗಳೂರು ಕುಕ್ಕರ್​ ಬಾಂಬ್​ ಸ್ಫೋಟದ ಶಂಕಿತ ಉಗ್ರ ಶಾರಿಕ್​ ಉಡುಪಿಗೂ ಭೇಟಿ ನೀಡಿದ್ದ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

suspected-militant-shariq-visited-udupi
ಉಡುಪಿಯಲ್ಲಿ ಕುಕ್ಕರ್​ ಸ್ಫೋಟದ ಶಂಕಿತ ಉಗ್ರ ಶಾರಿಕ್ ಜಾಡು

By

Published : Nov 29, 2022, 9:58 PM IST

ಉಡುಪಿ:ಹಿಂದು ದೇವಾಲಯಗಳನ್ನು ಟಾರ್ಗೆಟ್​ ಮಾಡಿಕೊಂಡು ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಸ್ಫೋಟಿಸಿದ್ದ ಶಂಕಿತ ಉಗ್ರ ಶಾರಿಕ್​ ಉಡುಪಿಗೂ ಭೇಟಿ ನೀಡಿದ್ದನೇ ಎಂಬ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದ್ದು, ಉಗ್ರನ ಹೆಜ್ಜೆ ಗುರುತುಗಳ ಬೆನ್ನಟ್ಟಿ ಉಡುಪಿಯ ಹಲವೆಡೆ ತನಿಖೆ ನಡೆಸಿದ್ದಾರೆ.

ಕೃಷ್ಣ ಮಠ ಟಾರ್ಗೆಟ್ ಆಗಿತ್ತಾ?: ಇಲ್ಲಿನ ಕೃಷ್ಣ ಮಠಕ್ಕೆ ಶಾರಿಕ್ ಬಂದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ರಥ ಬೀದಿಗೆ ಬಂದು ಪರಿಶೀಲನೆ ನಡೆಸಿರುವ ಮಂಗಳೂರು ಪೊಲೀಸರು ಶಾರಿಕ್ ಸುತ್ತಾಡಿದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಅಕ್ಟೋಬರ್ 11ರಂದು ಶಾರಿಕ್​ ಕೃಷ್ಣಮಠ ಹಾಗೂ ರಥಬೀದಿಯಲ್ಲಿ ​ಸುತ್ತಾಡಿದ್ದ. ರಥಬೀದಿಯಿಂದ ಶಾರಿಕ್​ ಮೊಬೈಲ್​ನಲ್ಲಿ ಮಹಿಳೆಯೊಬ್ಬರು ಮಾತನಾಡಿದ ವಿಷಯ ಬಯಲಿಗೆ ಬಂದಿದೆ. ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಉಡುಪಿಯಲ್ಲಿ ಸ್ಯಾಟಲೈಟ್ ಫೋನ್ ಸಕ್ರಿಯ: ಇಲ್ಲಿನ ಮಂದಾರ್ತಿ ಸಮೀಪದ ಅರಣ್ಯ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಸಕ್ರಿಯವಾಗಿದೆ ಎಂದು ರಾಜ್ಯ ಆಂತರಿಕ ಭದ್ರತಾ ವಿಭಾಗದಿಂದ ಜಿಲ್ಲಾ ಆಂತರಿಕ ವಿಭಾಗಕ್ಕೆ ಮಾಹಿತಿ ಬಂದಿದೆ. ಉಡುಪಿ ಜಿಲ್ಲೆಯಲ್ಲಿ ತುರಾಯ್ ಸ್ಯಾಟಲೈಟ್ ಕರೆ ಬಂದಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ.

ನವೆಂಬರ್​ 9 ರಂದು ಸಕ್ರಿಯಗೊಂಡಿದ್ದ ಸ್ಯಾಟಲೈಟ್ ಫೋನ್ ಉಡುಪಿ ಜಿಲ್ಲೆಯ ಮಂದಾರ್ತಿ ದೇವಸ್ಥಾನದಿಂದ ಸುಮಾರು ಒಂದೂವರೆ ಕಿಮೀ ದೂರದಲ್ಲಿ ಚಾಲ್ತಿಯಲ್ಲಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಇಲ್ಲಿನ ಗೇರುಬೀಜ ಕಾರ್ಖಾನೆ ಬಳಿ ಲೊಕೇಶನ್ ಟ್ರೇಸ್ ಆಗಿದೆ. 2020 ರಲ್ಲೂ ಜಿಲ್ಲೆಯಲ್ಲಿ ಸ್ಯಾಟಲೈಟ್ ಫೋನ್​ ಸದ್ದು ಮಾಡಿತ್ತು. ಕೊಲ್ಲೂರು, ಜಡ್ಡಿನಗುಡ್ಡೆ, ಹೆರ್ಮುಂಡೆ ಭಾಗದಲ್ಲಿ ಫೋನ್ ಚಾಲ್ತಿಯಲ್ಲಿದ್ದ ಬಗ್ಗೆ ಆಂತರಿಕ ಭದ್ರತಾ ವಿಭಾಗಕ್ಕೆ ಮಾಹಿತಿ ಲಭ್ಯವಾಗಿತ್ತು.

ಓದಿ:ಕೇರಳ ಸ್ಟೇಟ್ ಸೀಡ್ ಹೌಸ್​​.. ಈಗ ದೇಶದ ಮೊದಲ ಕಾರ್ಬನ್ ನ್ಯೂಟ್ರಲ್ ಫಾರ್ಮ್

ABOUT THE AUTHOR

...view details