ಉಡುಪಿ:ಈವಾಗ ಏನಿದ್ರೂ ಸ್ಮಾರ್ಟ್ ಫೋನ್ ಜಮಾನ. ಕೊವಿಡ್ನಿಂದ ಸ್ಮಾರ್ಟ್ ಫೋನ್ ಮೂಲಕ ಆನ್ಲೈನ್ ತರಗತಿ ಶುರುವಾಗಿದೆ. ಆದ್ರೆ ಎಲ್ಲಾ ಮಕ್ಕಳಿಗೆ ಮೊಬೈಲ್ ಖರೀದಿ ಮಾಡೋದು ತುಸು ಕಷ್ಟದ ಕೆಲಸ.
ಹಳ್ಳಿ ಮಕ್ಕಳು ಆನ್ಲೈನ್ ಶಿಕ್ಷಣದಿಂದ ವಂಚಿತರಾಗಬಾರದು ಅಂತಾ ಮೂರು ವಿದ್ಯಾರ್ಥಿನಿಯರು ಸ್ಮಾರ್ಟ್ ಫೋನ್ ದಾನ ಮಾಡೋ ಕೆಲಸ ಮಾಡ್ತಾ ಇದ್ದಾರೆ. ಅವನಿ, ಕೇಕಿ, ಅದಿತ್ರಿ ಎಂಬ ಮೂವರು ವಿದ್ಯಾರ್ಥಿಗಳು ಉಡುಪಿಯ ಖಾಸಗಿ ಸ್ಕೂಲ್ವೊಂದರಲ್ಲಿ ವಿದ್ಯಾಭ್ಯಾಸ ಮಾಡ್ತಾ ಇದ್ದಾರೆ.
ಮೊಬೈಲ್ ಗಿಫ್ಟ್ ಮಾಡುತ್ತಿರುವ ವಿದ್ಯಾರ್ಥಿಗಳು ಲಾಕ್ಡೌನ್ನಲ್ಲಿ ಮೂವರು ಸ್ಮಾರ್ಟ್ ಫೋನ್ ಗಿಫ್ಟ್ ಮಾಡೋ ಕೆಲಸ ಮಾಡುತ್ತಿದ್ದಾರೆ. ಉಡುಪಿಯ ಗ್ರಾಮೀಣ ಭಾಗದ ಶಾಲೆಯೊಂದರಲ್ಲಿ ಆನ್ಲೈನ್ ತರಗತಿಯಲ್ಲಿದ್ದ ಮಕ್ಕಳನ್ನು ಸರ್ವೆ ಮಾಡಿದಾಗ ಕೆಲವು ಮಕ್ಕಳಲ್ಲಿ ಮೊಬೈಲ್ ಇಲ್ಲದೇ ಇರೋದು ಕಂಡುಬಂತು. ಅಲ್ಲಿಂದ ಹಳ್ಳಿ ಮಕ್ಕಳು ಆನ್ಲೈನ್ ಶಿಕ್ಷಣದಿಂದ ವಂಚಿತರಾಗಬಾರದು ಅಂತಾ ಮೂವರು ವಿದ್ಯಾರ್ಥಿನಿಯರು ಶಾಲೆಗೆ ತೆರಳಿ ಮೊಬೈಲ್ ಗಿಫ್ಟ್ ಮಾಡೋ ಕೆಲಸ ಶುರುಮಾಡಿಕೊಂಡ್ರು.
ಮೊಬೈಲ್ ಗಿಫ್ಟ್ ಮಾಡುತ್ತಿರುವ ವಿದ್ಯಾರ್ಥಿಗಳು ಆರಂಭದಲ್ಲಿ ಪೋಷಕರ ಸಹಕಾರ ಪಡಕೊಂಡು ಪಾಕೆಟ್ ಮನಿ ಮೂಲಕ ಜಿಲ್ಲೆಯ ಚೇರ್ಕಾಡಿ ಸ್ಕೂಲ್ನ ಹತ್ತು ಮಕ್ಕಳಿಗೆ ಮೊಬೈಲ್ ಗಿಫ್ಟ್ ಮಾಡಿದ್ರು. ಅನಂತರ ಸಾಮಾಜಿಕ ಜಾಲತಾಣದಲ್ಲಿ ಗ್ರೂಪ್ ಮಾಡಿ ತೀರಾ ಗ್ರಾಮೀಣ ಶಾಲೆಯನ್ನು ಗುರುತಿಸಿ ಡೋನರ್ ಮೂಲಕ ಸುಮಾರು 47 ಮೊಬೈಲ್ಗಳನ್ನು ವಿದ್ಯಾರ್ಥಿಗಳಿಗೆ ಗಿಫ್ಟ್ ಮಾಡಿದ್ದಾರೆ.
ಮೊಬೈಲ್ ಗಿಫ್ಟ್ ಮಾಡುತ್ತಿರುವ ವಿದ್ಯಾರ್ಥಿಗಳು ಇವರ ಸಮಾಜಮುಖಿ ಕೆಲಸಕ್ಕೆ ಮಕ್ಕಳ ಪೋಷಕರು ಕೂಡಾ ಸಹಾಯ ಮಾಡಿದ್ದಾರೆ. ಜೊತೆಗೆ ದಾನಿಗಳು ಕೂಡಾ ವಿದ್ಯಾರ್ಥಿಗಳ ಕೆಲಸಕ್ಕೆ ಶಹಬ್ಬಾಸ್ ಅಂದಿದ್ದಾರೆ. ಡೊನೆಶನ್ ಬಂದ್ರೆ ಇನ್ನಷ್ಟು ಮೊಬೈಲ್ ಕೊಡೋ ಹುರುಪುಲ್ಲಿದ್ದಾರೆ ವಿದ್ಯಾರ್ಥಿನಿಯರು.