ಉಡುಪಿ:ಉಡುಪಿ ಕಡಲ ತೀರದಲ್ಲಿ ಮತ್ತೊಮ್ಮೆ ಮೀನಿನ ಸುಗ್ಗಿ ಕಂಡು ಬಂದಿದೆ. ಕಳೆದ ವಾರ ಟನ್ಗಟ್ಟಲೆ ಬೂತಾಯಿ ಮೀನುಗಳು ಸಮುದ್ರದ ದಡದಲ್ಲಿ ಬಿದ್ದ ಬೆನ್ನಲ್ಲೇ ಕೈರಂಪಣಿ ಮೀನುಗಾರರ ಬಲೆಗೆ ಬೃಹದಾಕಾರದ ನೂರಾರು ತೊರಕೆ ಮೀನುಗಳು ಬಿದ್ದಿವೆ.
ಕಾಪು ಮೂಳೂರು ಕಡಲ ತೀರದಲ್ಲಿ ಬಲೆ ಬಿದ್ದ ದೊಡ್ಡ ದೊಡ್ಡ ತೊರಕೆ ಮೀನುಗಳು 50 ಕೆಜಿಯಷ್ಟು ತೂಕ ಹೊಂದಿವೆ. ತೊರಕೆ ಮೀನುಗಳನ್ನು ನೋಡಲು ನೂರಾರು ಮಂದಿ ನೆರೆದಿದ್ದರು.
VIDEO: ಉಡುಪಿ ಮೀನುಗಾರರ ಬಲೆಗೆ ಬಿದ್ದ ನೂರಾರು ತೊರಕೆ ಮೀನುಗಳು ಮೀನುಗಾರರು ತೊರಕೆ ಮೀನುಗಳನ್ನು ದೊಡ್ಡ ದೊಡ್ಡ ಬಡಿಗೆಯಲ್ಲಿ ಕಟ್ಟಿ ಸಾಗಿಸಿದರು. ಕೆಜಿಗೆ 250ರಿಂದ 300 ರೂಪಾಯಿಗಳಷ್ಟು ಬೇಡಿಕೆ ಇರುವ ತೊರಕೆ ಮೀನುಗಳನ್ನು ಹುಲಿ ತೊರಕೆ ಎಂದೂ ಕರೆಯಲಾಗುತ್ತದೆ. ಮೈ ಮೇಲೆ ಹುಲಿ ಚರ್ಮದ ಆಕಾರ ಹೊಂದಿರುವುದರಿಂದ ಹುಲಿ ತೊರಕೆ ಎಂಬ ಹೆಸರು ರೂಢಿಯಲ್ಲಿದೆ.
ಇದನ್ನೂ ಓದಿ:ಉಡುಪಿ: ಮಲ್ಪೆ ಕಡಲ ತೀರದಲ್ಲಿ ರಾಶಿ ರಾಶಿ ಬೂತಾಯಿ ಮೀನುಗಳು!