ಕರ್ನಾಟಕ

karnataka

ETV Bharat / state

ಉಡುಪಿ ಸೈಂಟ್ ಮೇರಿಸ್ ಐಲ್ಯಾಂಡ್ ಪ್ರವಾಸಿಗರಿಗೆ ಮುಕ್ತ.. ಜನರು ಖುಷ್​

ಕರಾವಳಿ ಪ್ರವಾಸಿಗರಿಗೆ ಸಂತಸದ ಸುದ್ದಿ.. ಇಷ್ಟು ದಿನ ದೇಗುಲ, ಬೀಚ್, ಜಲಪಾತ ಅಂತ ಎಂಜಾಯ್ ಮಾಡ್ತಾ ಇದ್ದ ಪ್ರವಾಸಿಗರು ಇನ್ಮುಂದ ಮಲ್ಪೆಯ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳಬಹುದಾಗಿದೆ. ಸೈಂಟ್ ಮೇರಿಸ್ ಐಲ್ಯಾಂಡ್ ಪ್ರವಾಸಿಗರ ಭೇಟಿಗೆ ಮುಕ್ತವಾಗಿದೆ.

st. mary's Island reopen in Udupi
ಉಡುಪಿ

By

Published : Oct 27, 2020, 12:04 PM IST

ಉಡುಪಿ: ಕಣ್ಣಾಡಿಸಿದಲ್ಲೆಲ್ಲಾ ನೀಲಿ ಜಲಸಾಗರ.. ಅದರ ಮಧ್ಯೆ ಬಿಳಿ ಹಾಲ್ನೊರೆಯ ಅಲೆಗಳಲ್ಲಿ ತೇಲುತ್ತಾ ಸಾಗುವ ಬೋಟಿನಲ್ಲಿ ಎಂಜಾಯ್ ಮಾಡುವ ಪ್ರವಾಸಿಗರು.. ಉಡುಪಿಯ ಮಲ್ಪೆಯಿಂದ ಸುಮಾರು ಏಳು ಕಿಲೋ ಮೀಟರ್ ದೂರ, ಸಮುದ್ರ ಮಧ್ಯೆ ಇರೋ ಸೈಂಟ್ ಮೇರಿಸ್ ದ್ವೀಪಕ್ಕೆ ತೆರಳುವಾಗ ಕಂಡುಬರುವ ರಮಣೀಯ ದೃಶ್ಯಗಳಿವು..

ಉಡುಪಿ ಸೈಂಟ್​ ಮೇರಿಸ್​ ದ್ವೀಪದಲ್ಲಿ ಪ್ರವಾಸಿಗರ ದಂಡು
ಜಿಲ್ಲೆಯಲ್ಲಿ ಹಲವು ಬೀಚ್‌ಗಳು ಪ್ರವಾಸಿಗರನ್ನು ಸೆಳೆಯುತ್ತೆ, ಆದ್ರೆ ಸಮುದ್ರದ ಮಧ್ಯೆ ದ್ವೀಪ ಅಂತಾ ಇರೋದು ಸೈಂಟ್ ಮೇರಿಸ್ ಮಾತ್ರ. ಹೀಗಾಗಿ ದೂರದ ಊರುಗಳಿಂದ ಬರುವ ಪ್ರವಾಸಿಗರು ಸೈಂಟ್ ಮೇರಿಸ್ ಐಲ್ಯಾಂಡ್​​ಗೆ ಹೋಗೋದನ್ನು ಮಾತ್ರ ಮರೆಯಲ್ಲ. ಕೊರೊನಾ ಕಾರಣದಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗೋಕೆ ಇತ್ತೀಚಿನವರೆಗೂ ಅವಕಾಶ ಇರ್ಲಿಲ್ಲ. ಆದ್ರೀಗ ಜಿಲ್ಲಾಡಳಿತ ಅವಕಾಶ ನೀಡಿದ್ದು, ಬೋಟ್‌ನವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ದ್ವೀಪಕ್ಕೆ ಕರೆದುಕೊಂಡು ಹೋಗ್ತಿದ್ದಾರೆ.
ಸ್ಥಳೀಯ ಪ್ರವಾಸಿಗರು ಅಲ್ಲದೇ ದೂರದ ಊರುಗಳಿಂದ ಬರುವ ಪ್ರವಾಸಿಗರು, ಬೋಟ್ ಪ್ರಯಾಣ, ದ್ವೀಪದ ಸೌಂದರ್ಯ ಕಂಡು ಖುಷಿ ಪಡುತ್ತಿದ್ದಾರೆ. ವಿವಿಧ ಆಕೃತಿಯ ಕಲ್ಲು ಬಂಡೆಗಳು, ತಂಪಾದ ಗಾಳಿ, ಅಲೆಗಳ ಅಬ್ಬರ ನೋಡಿ ಸಂತಸ ಪಡುತ್ತಿದ್ದಾರೆ. ಐಲ್ಯಾಂಡ್‌ ಬೀಚ್‌ ಅಲೆಗಳ ಜೊತೆ ಆಡುತ್ತಾ ಈಜಾಡುತ್ತಾ, ಪೋಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡ್ತಿದ್ದಾರೆ.
ಒಟ್ಟಿನಲ್ಲಿ ಇಷ್ಟು ದಿನ ಉಡುಪಿಗೆ ಬರುವ ಪ್ರವಾಸಿಗರು ಐಲ್ಯಾಂಡ್‌‌ಗೆ ತೆರಳಲು ಅವಕಾಶ ಇಲ್ಲದೇ ನಿರಾಸೆಗೊಳ್ತಿದ್ರು. ಆದ್ರೀಗ ಜಿಲ್ಲಾಡಳಿತ ಅವಕಾಶ ನೀಡಿದ್ದು, ಸಮುದ್ರದ ಸ್ವಚ್ಛತೆ ಕಾಪಾಡಿ, ಸರ್ಕಾರದ ನಿಯಮಗಳನ್ನು ಪಾಲಿಸುವುದು ಕೂಡ ಪ್ರವಾಸಿಗರ ಜವಾಬ್ದಾರಿ ಆಗಿದೆ.

ABOUT THE AUTHOR

...view details