ಕರ್ನಾಟಕ

karnataka

ETV Bharat / state

ಸಿಕ್ಕಿದ್ರಲ್ಲೇ ಸಮಾಧಾನ ಪಟ್ಕೋಬೇಕು.. ಮುನಿಸಿಕೊಂಡ ಈಶ್ವರಪ್ಪಗೆ ರಾಮುಲು ಸಲಹೆ - cm

ನಾವ್ಯಾರೂ ಮಂತ್ರಿ ಆಗ್ತೇವೆ ಅಂತ ತಿಳ್ಕೊಂಡೇ ಇರ್ಲಿಲ್ಲ ಹಿರಿಯರ ಆಶೀರ್ವಾದದಿಂದ ಮಂತ್ರಿಗಳಾಗಿದ್ದೇವೆ. ಸಿಕ್ಕಿದ್ರಲ್ಲೇ ಸಮಾಧಾನ ಪಟ್ಕೋಬೇಕು ಎಂದ ರಾಮುಲು.

ಶ್ರೀರಾಮುಲು

By

Published : Sep 28, 2019, 7:46 PM IST

ಉಡುಪಿ: ನಾವ್ಯಾರೂ ಮಂತ್ರಿ ಆಗ್ತೇವೆ ಅಂತ ತಿಳ್ಕೊಂಡೇ ಇರ್ಲಿಲ್ಲ ಹಿರಿಯರ ಆಶೀರ್ವಾದದಿಂದ ಮಂತ್ರಿಗಳಾಗಿದ್ದೇವೆ. ಸಿಕ್ಕಿದ್ರಲ್ಲೇ ಸಮಾಧಾನ ಪಟ್ಕೋಬೇಕು. ಮನುಷ್ಯನಿಗೆ ಆಸೆ ಸಹಜ ಆದ್ರೆ ಇದ್ದಿದ್ರಲ್ಲೇ ಹೊಂದಾಣಿಕೆ ಮಾಡ್ಕೊಂಡು ಜನರಿಗೆ ಸಹಾಯ ಮಾಡಿ ಅಂತಾ ಸಿಎಂ ಯಡಿಯೂರಪ್ಪ ವಿರುದ್ಧ ಸಿಟ್ಟುಮಾಡಿಕೊಂಡ ಈಶ್ವರಪ್ಪಗೆ ಶ್ರೀರಾಮಲು ಬುದ್ಧಿ ಹೇಳಿದ್ದಾರೆ.

ಯಡಿಯೂರಪ್ಪ ಬಗ್ಗೆ ಈಶ್ವರಪ್ಪ ಮುನಿಸು:ಈಶ್ವರಪ್ಪಗೆ ಶ್ರೀರಾಮುಲು ಬುದ್ಧಿವಾದ

ಎರಡು ದಿನಗಳಿಂದ ರಾಮುಲು ಜಿಲ್ಲಾ ಪ್ರವಾಸದಲ್ಲಿದ್ದು, ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಕೆಶಿಗೆ ಇಡಿ‌ ಕಿರುಕುಳ ಆರೋಪ ಬಗ್ಗೆ ಪ್ರಶ್ನೆಗೆ ಕೋರ್ಟ್​ನಲ್ಲಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡೋದು ಸರಿಯಲ್ಲ. ಡಿಕೆಶಿ ತೊಂದರೆಯಲ್ಲಿರುವ ಸಮಯದಲ್ಲಿ ಮಾತನಾಡಲು ಇಷ್ಟಇಲ್ಲ. ನಿಯಮದಂತೆ ಕಾನೂನು ಪ್ರಕ್ರಿಯೆ ಮುಂದುವರಿಯಲಿ ಅಂತಾ ಹೇಳಿದರು.

ನಳೀನ್ ಮತ್ತು ಯಡಿಯೂರಪ್ಪ ನಡುವೆ ಮುಸುಕಿನ‌ ಗುದ್ದಾಟ ವಿಚಾರದಲ್ಲಿ ಮಾತನಾಡಿದ ರಾಮುಲು ನಮ್ಮಲ್ಲಿ ಯಾವುದೇ ಮುಸುಕಿನ ಗುದ್ದಾಟ ಇಲ್ಲ, ಹೊರಗಿನ ಗುದ್ದಾಟವೂ ಇಲ್ಲ ಕಟೀಲ್ ನೇತೃತ್ವದಲ್ಲಿ ಪಕ್ಷ ಮುಂದುವರಿಯುತ್ತೆ ಸರ್ಕಾರದ ವಿಷಯಕ್ಕೆ ಬಂದ್ರೆ ಯಡಿಯೂರಪ್ಪನೇ ನಮ್ಮ ನಾಯಕರು ಎಂದು ತಿಳಿಸಿದರು.

ಬಳ್ಳಾರಿ ವಿಭಜನೆ ವಿವಾದಕ್ಕೆ ಸಂಬಂಧಿಸಿ ಮಾತನಾಡಿ ಸಿಎಂ ಕರೆದ ಸಭೆಗೆ ಹೋಗೋಕೆ ಆಗಿಲ್ಲ. ಮುಂದೆ ನಾನು ಹೋಗಿ‌ ನನ್ನ ಸಲಹೆ ಕೊಡ್ತೇನೆ ಇದೆಲ್ಲಾ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ನಾನಿನ್ನೂ ಶಾಸಕರನ್ನು ಒಟ್ಟುಗೂಡಿಸಿ ಮಾತನಾಡಿಲ್ಲ. ಎಲ್ಲರ ಜೊತೆ ಮಾತಾಡಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಇವತ್ತು ನನ್ನ ವೈಯ್ಯಕ್ತಿಕ ವಿಚಾರ ಹೇಳಲಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಹಾಗೆ ಮಾತನಾಡೋದು ಸರಿಯಲ್ಲ. ಸರ್ಕಾರಕ್ಕೆ ಮುಜುಗರ ಆಗಬಾರದು, ಗೌಪ್ಯವಾಗಿ ಸಿಎಂ ಜೊತೆ ಮಾತನಾಡುವೆ ಎಂದು ಆಭಿಪ್ರಾಯ ವ್ಯಕ್ತಪಡಿದ್ದಾರೆ‌.

ABOUT THE AUTHOR

...view details