ಕರ್ನಾಟಕ

karnataka

ETV Bharat / state

ಯೋಗಿ ಆದಿತ್ಯನಾಥ್ ಭೇಟಿ ಮಾಡಿದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು - CM Yogi Adityanath news

ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಭೇಟಿ ಮಾಡಿದರು. ಯೋಗಿಯವರು ಶ್ರೀಗಳವರನ್ನು ಆದರಪೂರ್ವಕವಾಗಿ ಬರಮಾಡಿಕೊಂಡರು.

ಯೋಗಿ ಆದಿತ್ಯನಾಥ್ ಭೇಟಿ ಮಾಡಿದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು
ಯೋಗಿ ಆದಿತ್ಯನಾಥ್ ಭೇಟಿ ಮಾಡಿದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು

By

Published : Nov 3, 2020, 10:39 PM IST

ಉಡುಪಿ: ಅಯೋಧ್ಯೆ ರಾಮಮಂದಿರ ಟ್ರಸ್ಟ್​​ನ ವಿಶ್ವಸ್ಥರಾಗಿರುವ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದರು .

ಯೋಗಿ ಆದಿತ್ಯನಾಥ್ ಭೇಟಿ ಮಾಡಿದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು

ಯೋಗಿಯವರು ಶ್ರೀಗಳವರನ್ನು ಆದರಪೂರ್ವಕವಾಗಿ ಬರಮಾಡಿಕೊಂಡರು. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡ್ಡಿಯುರಪ್ಪನವರು ಅಯೋಧ್ಯೆಯಲ್ಲಿ ಭವಿಷ್ಯದಲ್ಲಿ ರಾಮಮಂದಿರಕ್ಕಾಗಿ ತೆರಳುವ ರಾಜ್ಯದ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಭವ್ಯ ಕರ್ನಾಟಕ ಯಾತ್ರಿ ಭವನ ನಿರ್ಮಿಸಲು ಭೂಮಿ ಒದಗಿಸುವಂತೆ ಉ.ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಯೋಗಿಯವರನ್ನು ಭೇಟಿ ಮಾಡಿದ ಪೇಜಾವರ ಶ್ರೀಗಳು ಈ ವಿಷಯವನ್ನು ಯೋಗಿಯವರ ಸ್ಮರಣೆಗೆ ತಂದಿದರು.ಇದಕ್ಕೆ ಪ್ರತಿಕ್ರಿಯಿಸಿದ ಯೋಗಿಯವರು ಆದಷ್ಟು ಶೀಘ್ರ ಭೂಮಿಯನ್ನು ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ್ ಭೇಟಿ ಮಾಡಿದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು

ಇದೇ ವೇಳೆ ಕೊರೊನಾ ವಿಪತ್ತಿನ ಕುರಿತು ಮಾತನಾಡಿ, ಲೋಕದೊಳಿತಿಗಾಗಿ ಶ್ರೀ ಕೃಷ್ಣನಲ್ಲಿ ಪ್ರಾರ್ಥಿಸುವಂತೆ ಯೋಗಿಯವರು ಶ್ರೀಗಳ ಬಳಿ ವಿನಂತಿಸಿದರು. ಬಳಿಕ ಶ್ರೀರಾಮಮಂದಿರ ನಿರ್ಮಾಣ ವಿಷಯದ ಕುರಿತಾಗಿಯೂ ಮಾತುಕತೆ ನಡೆಸಿದರು‌‌. ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​ನ ಅಧ್ಯಕ್ಷರು ಮಹಾಂತ ನೃತ್ಯ ಗೋಪಾಲ ದಾಸ್ ಜಿ, ಮಣಿ ರಾಮ ಚಾವಣಿ ಅಯೋಧ್ಯ ಮತ್ತು ಅವರ ಉತ್ತಾರಾಧಿಕಾರಿ ಕಮಲ ನಯನ ದಾಸ್ ಜಿ, ಪೇಜಾವರ ಶ್ರೀಪಾದರು ಅವರ ಭೇಟಿಯಾದರು.

ABOUT THE AUTHOR

...view details