ಉಡುಪಿ: ರಾಜ್ಯದಲ್ಲಿ ಅತಿವೃಷ್ಟಿ ಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಮಳೆ ಕಡಿಮೆಯಾಗಲಿ ಎಂದು ಪ್ರಾರ್ಥಿಸಿ ಉಡುಪಿಯಲ್ಲಿ ದೇವರ ಮೊರೆ ಹೋಗಲಾಗಿದೆ. ಶ್ರೀ ಕ್ರಷ್ಣ ಮಠದ ರಥಬೀದಿಯಲ್ಲಿರುವ ಅನಂತೇಶ್ವರ ದೇವರಿಗೆ ಚಿತ್ರಾನ್ನ ಸೇವೆ ಮೂಲಕ ನೆರೆ ಕಡಿಮೆ ಮಾಡುವಂತೆ ಪ್ರಾರ್ಥನೆ ಸಲ್ಲಿಸಲಾಯಿತು.
ಮಳೆ ನಿಲ್ಲಿಸಲು ಪ್ರಾರ್ಥಿಸಿ ಅನಂತೇಶ್ವರನಿಗೆ ಚಿತ್ರಾನ್ನ ಸೇವೆ: ಶ್ರೀ ಕೃಷ್ಣ ಮಠದಲ್ಲಿ ವಿಶೇಷ ಪೂಜೆ
ರಾಜ್ಯದಲ್ಲಿ ಸುರಿದ ನಿರಂತರ ಮಳೆಗೆ ಜನಜೀವನ ಸಂಫೂರ್ಣ ಅಸ್ತವ್ಯಸ್ತವಾಗಿದ್ದು, ಈ ನಿಟ್ಟಿನಲ್ಲಿ ಅತಿವೃಷ್ಟಿ ಸಮತೋಲನಕ್ಕೆ ಉಡುಪಿಯಲ್ಲಿ ದೇವರ ಮೊರೆ ಹೋಗಲಾಗಿದ್ದು,ಶ್ರೀ ಕ್ರಷ್ಣ ಮಠದ ರಥಬೀದಿಯಲ್ಲಿರುವ ಅನಂತೇಶ್ವರ ದೇವರಿಗೆ ಚಿತ್ರಾನ್ನ ಸೇವೆ ಮೂಲಕ ನೆರೆ ಕಡಿಮೆ ಮಾಡುವಂತೆ ಪ್ರಾರ್ಥನೆ ಸಲ್ಲಿಸಲಾಗಿದೆ.
ಶ್ರೀ ಕೃಷ್ಣ ಮಠದಲ್ಲಿ ವಿಶೇಷ ಪ್ರಾರ್ಥನೆ
ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಚಿತ್ರಾನ್ನ ಸೇವೆ ನಡೆದಿದ್ದು,ಅನಂತೇಶ್ವರನಿಗೆ ಚಿತ್ರಾನ್ನ ಸೇವೆಯನ್ನು ಸಮಿತಿಯ ವತಿಯಿಂದ ಮಾಡಲಾಯಿತು,ಪರ್ಯಾಯ ಪೀಠಾಧಿಪತಿ ವಿದ್ಯಾಧೀಶ ತೀರ್ಥ ಶ್ರೀಪಾದರು,ಪಾಲಿಮಾರು ಕಿರಿಯ ಶ್ರೀ,ಸಮಿತಿಯ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದು ಸೇವೆಯನ್ನು ಸಲ್ಲಿಸಿ ಪ್ರಾರ್ಥನೆ ಮಾಡಿಕೊಂಡರು.