ಕರ್ನಾಟಕ

karnataka

ETV Bharat / state

ವಿಭಿನ್ನ ಆಚರಣೆ: ಜೀವಂತ ನಾಗನಿಗೇ ಹಾಲೆರೆದು, ಪೂಜಿಸಿದ ಈ ಭೂಪ!

ನಾಗರ ಪಂಚಮಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಈ ದಿನ ನಾಗ ಮೂರ್ತಿಗೆ ಹಾಲೆರೆದು ಪೂಜಿಸಲಾಗುತ್ತದೆ. ಆದ್ರೆ ಇಲ್ಲೋರ್ವ ವ್ಯಕ್ತಿ ಜೀವಂತ ನಾಗನನ್ನು ಪೂಜಿಸುವ ಮೂಲಕ ನಾಗರಪಂಚಮಿಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ಜೀವಂತ ನಾಗನಿಗೆ ಹಾಲೆರೆದು ಪೂಜಿಸಿದ ಈ ಭೂಪ

By

Published : Aug 5, 2019, 9:52 PM IST

ಉಡುಪಿ: ನಾಗರ ಪಂಚಮಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಈ ದಿನ ನಾಗ ಮೂರ್ತಿಗೆ ಹಾಲೆರೆದು ಪೂಜಿಸಲಾಗುತ್ತದೆ. ಆದ್ರೆ ಇಲ್ಲೋರ್ವ ವ್ಯಕ್ತಿ ಜೀವಂತ ನಾಗನನ್ನು ಪೂಜಿಸುವ ಮೂಲಕ ನಾಗರಪಂಚಮಿಯನ್ನು ಬಹಳ ವಿಭಿನ್ನವಾಗಿ ಆಚರಿಸಿದ್ದಾರೆ.

ಜೀವಂತ ನಾಗನಿಗೆ ಹಾಲೆರೆದು ಪೂಜಿಸಿದ ಈ ಭೂಪ

ಕಾಪುವಿನ ಮಲ್ಲಾರು ನಿವಾಸಿ ಗೋವರ್ಧನ್ ಭಟ್ ವಿಭಿನ್ನವಾಗಿ ಹಬ್ಬ ಆಚರಿಸಿದವರು. ಇವರು ಎಲೆಕ್ಟ್ರಿಕಲ್ ಉದ್ಯೋಗಿಯಾಗಿದ್ದು, ಕಾಪು ಪರಿಸರದಲ್ಲಿ ಚಿರಪರಿಚಿತರು. ಈ ಪರಿಸರದಲ್ಲಿ ಎಲ್ಲೇ ಹಾವುಗಳು ಸಂಕಷ್ಟದಲ್ಲಿದ್ದರೆ ಗೋವರ್ಧನ್ ನೆರವಿಗೆ ದಾವಿಸುತ್ತಾರೆ. ಗಾಯಗೊಂಡ ಹಾವುಗಳನ್ನು ಆರೈಕೆ ಮಾಡಿ, ಗುಣಮುಖವಾದ ನಂತರ ಕಾಡಿಗೆ ಬಿಡುವ ಮೂಲಕ ಹಲವು ಬಾರಿ ಉರಗ ಪ್ರೇಮ ಮೆರೆದಿದ್ದಾರೆ.

ಇನ್ನು ಪ್ರತಿ ವರ್ಷ ನಾವು ನಿಜವಾದ ಹಾವಿಗೆ ಪುಜಿಸುವುದು ಸಾಮಾನ್ಯ ವಾಡಿಕೆ. ಇದು ದೇವರ ದಯೆಯಿಂದ ಸಾಧ್ಯ ಎಂದು ಗೋರ್ವಧನ್ ಭಟ್ ತಿಳಿಸಿದ್ದಾರೆ.

ABOUT THE AUTHOR

...view details