ಉಡುಪಿ : ಮಗನೇ ತನ್ನ ತಂದೆಯನ್ನು ಕೊಂದ ದಾರುಣ ಘಟನೆ ಕೋಟೇಶ್ವರ ಸಮೀಪದ ಗೋಪಾಡಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಗೋಪಾಡಿ ಗ್ರಾಮದ ಹಾಲಾಡಿ ನಿವಾಸಿ ನರಸಿಂಹ ಮರಕಾಲ (74) ಎಂದು ಗುರುತಿಸಲಾಗಿದೆ.
ಪುತ್ರ ರಾಘವೇಂದ್ರ (36) ಕೊಲೆಗೈದ ಆರೋಪಿ. ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ಮಗ ರಾಘವೇಂದ್ರ ಕೊಡಲಿಯಿಂದ ತಂದೆಯನ್ನು ಕೊಚ್ಚಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.