ಉಡುಪಿ: ತಂದೆ ಮಗನ ನಡುವಿನ ಕ್ಷುಲ್ಲಕ ಜಗಳ ಮಗನ ಸಾವಿನಲ್ಲಿ ಅಂತ್ಯವಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯ್ಯಾರು ಮಂಗಳಪಾದೆ ಎಂಬಲ್ಲಿ ನಡೆದಿದೆ.
ಕ್ಷುಲ್ಲಕ ಜಗಳದಲ್ಲಿ ಚೂರಿಯಿಂದ ತೊಡೆಗೆ ಇರಿದ ತಂದೆ.. ರಕ್ತ ಸ್ರಾವದಿಂದ ಮಗ ಸಾವು - son killed by father in udupi news
ತಂದೆ ಮಗನ ನಡುವಿನ ಕ್ಷುಲ್ಲಕ ಜಗಳ ಮಗನ ಸಾವಿನಲ್ಲಿ ಅಂತ್ಯವಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಿಯ್ಯಾರು ಮಂಗಳಪಾದೆ ಎಂಬಲ್ಲಿ ನಡೆದಿದೆ.
ಕಾರ್ಕಳ ತಾಲೂಕು ಮಂಗಳಪಾದೆ ನಿವಾಸಿ ವಿವಿಯನ್ ಡಿಸೋಜ (24) ಕೊಲೆಯಾಗಿದ್ದು, ತಂದೆ ವಿಕ್ಟರ್ ಡಿಸೋಜ (58) ಆರೋಪಿಯಾಗಿದ್ದಾರೆ. ಮುಂಬೈನಲ್ಲಿ ಹೋಟೆಲ್ ಕೆಲಸ ಮಾಡಿಕೊಂಡಿದ್ದ ವಿವಿಯನ್ ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದರು. ಉದ್ಯೋಗ ವಿಲ್ಲದೇ ಮನೆಯಲ್ಲೇ ಕಾಲ ಕಳೆಯುತ್ತಿದ್ದ ವಿವಿಯನ್ ಮತ್ತು ಇವರ ತಂದೆ ಕ್ಷುಲ್ಲಕ ವಿಚಾರದಲ್ಲಿ ನಿನ್ನೆ ಜಗಳ ಆಗಿತ್ತು. ಈ ಜಗಳದಿಂದ ವಿಕ್ಟರ್ ಡಿಸೋಜ ಮಗನ ತೊಡೆಗೆ ಬಲವಾಗಿ ಚೂರಿಯಿಂದ ಇರಿದಿದ್ದರು.
ರಕ್ತಸ್ರಾವ ನಿಲ್ಲದೆ ವಿವಿಯನ್ ಮೃತಪಟ್ಟಿದ್ದಾರೆ. ಕಾರ್ಕಳ ನಗರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ವಿಕ್ಟರ್ ನನ್ನ ಬಂಧಿಸಿದ್ದಾರೆ.