ಉಡುಪಿ:ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ನಗರಕ್ಕೆ ನೀರು ಪೂರೈಕೆ ಮಾಡುವ ಸ್ವರ್ಣ ನದಿಯಲ್ಲಿ ತುಂಬಿದ್ದ ಕಸ, ಹೂಳು ತೆಗೆಯೋ ಕೆಲಸ ನಡೆಯಿತು. ಈ ವೇಳೆ ನಗರಸಭಾ ಸದಸ್ಯರು, ಬಿಜೆಪಿ ಕಾರ್ಯಕರ್ತರು ಶ್ರಮದಾನದಲ್ಲಿ ಪಾಲ್ಗೊಂಡರು.
ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಶ್ರಮದಾನ:ಬಜೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಏರಿಕೆ - undefined
ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಇಲ್ಲಿನ ಸ್ವರ್ಣ ನದಿಯಲ್ಲಿದ್ದ ಕಸ, ಕಡ್ಡಿ, ಹೂಳು, ಬಂಡೆಕಲ್ಲುಗಳನ್ನು ತೆರವುಗೊಳಿಸುವ ಕೆಲಸ ನಡೆಯಿತು.

ನಗರದ 35 ವಾರ್ಡುಗಳಿಗೆ ನೀರು ಪೂರೈಸೋ ಸ್ವರ್ಣ ನದಿ ಹರಿವು ಸಂಪೂರ್ಣ ನಿಂತಿದ್ದು, ನೀರು ಖಾಲಿಯಾಗಿದೆ. ಹೀಗಾಗಿ ಹಿರಿಯಡ್ಕದ ಬಜೆ ಅಣೆಕಟ್ಟಿಗೆ ಬೇರೆ ಕಡೆಯಿಂದ ಡ್ರೆಜ್ಜಿಂಗ್ ಮೂಲಕ ನೀರನ್ನ ಪಂಪ್ ಮಾಡಲಾಗಿದೆ. ಈ ನೀರು ಸರಾಗವಾಗಿ ಹರಿಯುವ ನಿಟ್ಟಿನಲ್ಲಿ ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ನಾಗರಿಕರು, ನಗರಸಭಾ ಸದಸ್ಯರು, ಬಿಜೆಪಿ ಕಾರ್ಯಕರ್ತರು ಕಸ, ಕಡ್ಡಿ, ಹೂಳು, ಬಂಡೆಕಲ್ಲುಗಳನ್ನು ತೆರವು ಮಾಡುವ ಮೂಲಕ ಶ್ರಮದಾನ ಮಾಡಿದ್ದಾರೆ.
ಜೆಸಿಬಿ ಮೂಲಕ ನದಿ ಹರಿವಿಗೆ ಇದ್ದ ಅಡೆತಡೆಗಳನ್ನು ದೂರ ಮಾಡಿ ನೀರು ಹರಿಯಲು ದಾರಿ ಮಾಡಲಾಗಿದ್ದರಿಂದ ಇದೀಗ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಒಂದೂವರೆ ಮೀಟರ್ನಷ್ಟು ಏರಿಕೆಯಾಗಿದೆ.