ಕರ್ನಾಟಕ

karnataka

ETV Bharat / state

ಉಡುಪಿಯಲ್ಲಿ ಪರಿಸ್ಥಿತಿ ಕೈ ಮೀರುತ್ತಿದೆ, ದಯವಿಟ್ಟು ಟೆಸ್ಟ್ ಮಾಡಿಸಿ : ಡಿಸಿ ಜಿ ಜಗದೀಶ್ - D C Jagadish request to people for corona testing

ಸಂಬಂಧಿಕರು ಮತ್ತು ಬಂಧುಗಳೇ ಮನೆಗೆ ಬಂದರೂ ಸಾಮಾಜಿಕ ಅಂತರ ಪಾಲಿಸಬೇಕು. ಈ ಸಮಯದಲ್ಲಿ ಸಂಬಂಧಿಕರು ಮನೆಯಲ್ಲಿದ್ದರೂ ಐಸೊಲೇಷನ್‌ನಲ್ಲಿರಲಿ. ಮನೆಯ ಒಬ್ಬರಿಗೆ ಬಂದರೆ ಎಲ್ಲರಿಗೂ ಸೋಂಕು ಹರಡುತ್ತದೆ. ಇದರಿಂದ ಸಮಸ್ಯೆ ಬಿಗಡಾಯಿಸುತ್ತದೆ..

dc-jagadish
ಡಿಸಿ ಜಿ ಜಗದೀಶ್

By

Published : May 4, 2021, 6:02 PM IST

ಉಡುಪಿ : ನಗರದ ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಭರ್ತಿಯಾದ ಹಿನ್ನೆಲೆ ಜನರಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ತುರ್ತು ಮನವಿಯೊಂದನ್ನು ಮಾಡಿದ್ದು, ಸೋಂಕಿನ ಲಕ್ಷಣ ಕಂಡು ಬಂದ ಕೂಡಲೇ ಟೆಸ್ಟ್ ಮಾಡಿಸಿ ಎಂದು ವಿನಂತಿ ಮಾಡಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ. ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸೋಂಕಿನ ಲಕ್ಷಣ ಇರುವವರು ನಿರ್ಲಕ್ಷ್ಯ ಮಾಡಬಾರದು.

ಲಕ್ಷಣ ಇದ್ದರೂ 10-15 ದಿನ ಮನೆಯಲ್ಲೇ ಇದ್ದು, ಕೊರೊನಾ ಉಲ್ಬಣಿಸಿದ ನಂತರ ನೇರ ಐಸಿಯೂಗೆ ಬರುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಮಾಡಬೇಡಿ, ತಕ್ಷಣ ಬಂದು ಟೆಸ್ಟ್ ಮಾಡಿಸಿ ಎಂದು ಮನವಿ ಮಾಡಿದ್ದಾರೆ.

ಜನರಲ್ಲಿ ಮನವಿ ಮಾಡಿದ ಜಿಲ್ಲಾಧಿಕಾರಿ ಜಿ ಜಗದೀಶ್..

ಸಂಬಂಧಿಕರು ಮತ್ತು ಬಂಧುಗಳೇ ಮನೆಗೆ ಬಂದರೂ ಸಾಮಾಜಿಕ ಅಂತರ ಪಾಲಿಸಬೇಕು. ಈ ಸಮಯದಲ್ಲಿ ಸಂಬಂಧಿಕರು ಮನೆಯಲ್ಲಿದ್ದರೂ ಐಸೊಲೇಷನ್‌ನಲ್ಲಿರಲಿ. ಮನೆಯ ಒಬ್ಬರಿಗೆ ಬಂದರೆ ಎಲ್ಲರಿಗೂ ಸೋಂಕು ಹರಡುತ್ತದೆ. ಇದರಿಂದ ಸಮಸ್ಯೆ ಬಿಗಡಾಯಿಸುತ್ತದೆ ಎಂದು ಎಚ್ಚರಿಸಿದ್ದಾರೆ.

ಓದಿ:ಹೊರ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದ ಘಟಕವನ್ನು ಸುಪರ್ದಿಗೆ ಪಡೆಯಲಾಗಿದೆ : ಡಿಸಿ ವಿ ವಿ ಜೋತ್ಸ್ನಾ

ABOUT THE AUTHOR

...view details