ಉಡುಪಿ :ಮೀಸಲಾತಿ ಕೇಳುವುದು ತಪ್ಪೇನಿಲ್ಲ. ಸಂವಿಧಾನಾತ್ಮಕವಾಗಿ ಅರ್ಹತೆ ಇರುವವರಿಗೆ ಮೀಸಲಾತಿ ಕೊಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇದನ್ನು ಪರಿಶೀಲಿಸಿ ಶಿಫಾರಸು ಮಾಡಬೇಕು. ಹೊಸ ಸೇರ್ಪಡೆ ಮತ್ತು ಮೀಸಲಾತಿ ಕೈಬಿಡುವ ಬಗ್ಗೆ ಆಯೋಗ ಶಿಫಾರಸು ಮಾಡಬೇಕು. ರಾಜ್ಯದಲ್ಲಿ ನಿತ್ಯ ಹೋರಾಟಗಳು ನಡೆಯುತ್ತಿವೆ. ಸರ್ಕಾರ ಸಂವಿಧಾನಾತ್ಮಕವಾಗಿ ಶೀಘ್ರ ತೀರ್ಮಾನ ಮಾಡಲಿ ಎಂದು ಸಲಹೆ ನೀಡಿದರು.
ಯಾರಿಂದಲೂ 5 ಪೈಸೆ ಪಡೆದಿಲ್ಲ :ಐಎಂಎ ವಂಚಕ ಮನ್ಸೂರ್‌ಗೂ ನನಗೂ ಯಾವುದೇ ಸಂಬಂಧ ಇಲ್ಲ. ಯಾರಿಗೋ ಹಣ ಕೊಟ್ಟು ನನಗೆ ಕೊಟ್ಟಿದ್ದಾನೆ ಅಂದರೆ ಏನು ಪ್ರಯೋಜನ? ಅವನು ಯಾರಿಗೆ ಕೊಟ್ಟಿದ್ದಾನೆ ಅವನಿಂದ ವಸೂಲಿ ಮಾಡಲಿ. ಐ ಡೋಂಟ್ ನೋ.. ನಾನು ಯಾರಿಂದಲೂ 5 ಪೈಸೆ ಪಡೆದಿಲ್ಲ. ನನಗೆ ಮನ್ಸೂರ್‌ನಿಂದ ಹಣ ಪಡೆಯುವ ಯಾವ ಅಗತ್ಯವೂ ಇಲ್ಲ ಎಂದರು.