ಕರ್ನಾಟಕ

karnataka

ETV Bharat / state

ಕರ್ತವ್ಯ ಲೋಪ ಆರೋಪದಡಿ ಎಸ್​​ಐ ಅಮಾನತು... ಸಸ್ಪೆಂಡ್​​ ಖಂಡಿಸಿ ಶಾಸಕನ ಕಿಡಿ - ಸ್ಥಳೀಯ ಶಾಸಕರು ಎಸ್ಪಿ ವಿರುದ್ಧ ಕಿಡಿ

ಆಡಳಿತ ಪಕ್ಷದ ಜನಪ್ರತಿನಿಧಿಗಳು ನಿರ್ಧಿಷ್ಟ ಪೊಲೀಸರ ವರ್ಗಾವಣೆ, ಸಸ್ಪೆಂಡ್ ಗೆ ಒತ್ತಾಯಿಸಿ ಸರ್ಕಾರದ ಮೇಲೆ ಒತ್ತಡ ಹೇರೋದುಂಟು, ಆದರೆ, ಉಡುಪಿಯಲ್ಲಿ ಇದಕ್ಕೆ ತದ್ವಿರುದ್ದವಾದ ಬೆಳವಣಿಗೆ ನಡೆದಿದೆ. ಎಸ್​​ಐ ಒಬ್ಬರ ಸಸ್ಪೆಂಡ್​​ ಖಂಡಿಸಿ ಸ್ಥಳೀಯ ಶಾಸಕರು ಎಸ್ಪಿ ವಿರುದ್ಧ ಕಿಡಿಕಾರಿದ್ದಾರೆ.

ಕಿಡಿ

By

Published : Nov 12, 2019, 8:20 PM IST

ಉಡುಪಿ:ನಗರಠಾಣಾ ಎಸ್​​ಐ ಅನಂತ ಪದ್ಮನಾಭ ಅವರನ್ನು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಇದ್ದಕ್ಕಿದ್ದಂತೆ ಅಮಾನತು ಮಾಡಿದ್ದಾರೆ. ಈ ಮಧ್ಯೆ ಆಡಳಿತ ಪಕ್ಷದ ಶಾಸಕ ರಘುಪತಿ ಭಟ್ ಎಸ್​ಐ ಅಮಾನತು ಪ್ರಕ್ರಿಯೆ ಖಂಡಿಸಿದ್ದು, ಸಸ್ಪೆಂಡ್ ರದ್ದು ಮಾಡುವಂತೆ ಗೃಹ ಸಚಿವರಿಗೆ ಒತ್ತಾಯಿಸಿದ್ದಾರೆ.

ನವೆಂಬರ್ 4ರಂದು ಉಡುಪಿಯ ಅಜ್ಜರಕಾಡು ಪಾರ್ಕ್​ನಲ್ಲಿ ಪರಸ್ಪರ ಭಿನ್ನಕೋಮಿನ ಯುವ ಜೋಡಿ ಅಸಭ್ಯ ವರ್ತನೆ ತೋರುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದರು. ನಾಗರಿಕರು ಈ ಜೋಡಿಗೆ ಧರ್ಮದೇಟು ಕೊಟ್ಟು ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ವಿಚಾರಣೆ ನಡೆಸಿದ್ದರು. ಆದರೆ, ಎರಡೂ ಕಡೆಯವರು ದೂರು ನೀಡಲು ನಿರಾಕರಿಸಿದಾಗ ರಾಜಿಯಲ್ಲಿ ಪ್ರಕರಣ ಇತ್ಯರ್ಥವಾಗಿತ್ತು. ಆ ಬಳಿಕ ಯುವಕನ ಕಡೆಯವರು ಹೋಗಿ ಹಲ್ಲೆ ಮಾಡಿದ ಬಗ್ಗೆ ಎಸ್ಪಿಗೆ ದೂರು ನೀಡಿದ್ದರು. ಹಾಗಾಗಿ ಎಸ್ಪಿ ನಿಶಾ ಜೇಮ್ಸ್ ದೂರು ದಾಖಲಿಸಿಕೊಳ್ಳದೇ ಕರ್ತವ್ಯಲೋಪ ಮಾಡಿದ ಆರೋಪದಲ್ಲಿ ಎಸ್​​ಐ ಅನಂತ ಪದ್ಮನಾಭ ಅವರನ್ನು ಅಮಾನತು ಮಾಡಿದ್ದಾರೆ.

ಸಸ್ಪೆಂಡ್​​ ಖಂಡಿಸಿ ಶಾಸಕನ ಕಿಡಿ

ಈ ಸಂಬಂಧ ಸೌಹಾರ್ದಕ್ಕೆ ಅಡ್ಡಿಯಾಗಬಾರದು ಅನ್ನೋ ಉದ್ದೇಶದಿಂದ ಎಸ್​ಐ ತೆಗೆದುಕೊಂಡ ಕ್ರಮ ಸರಿಯಾಗಿದೆ. ಅಯೋಧ್ಯೆ ತೀರ್ಪು ಬರಬೇಕಾಗಿದ್ದ ಹಿನ್ನೆಲೆಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಎಸ್​​ಐ ಸರಿಯಾಗಿ ನಡೆದುಕೊಂಡಿದ್ದಾರೆ ಎಂದು ಎಸ್ಪಿ ವರ್ತನೆ ವಿರುದ್ಧ ಶಾಸಕ ರಘುಪತಿ ಭಟ್ ಕಿಡಿಕಾರಿದ್ದಾರೆ.

ABOUT THE AUTHOR

...view details