ಉಡುಪಿ: ನಾವ್ಯಾರು ಗೊತ್ತಾ, ನಮ್ಮ ಮೇಲೆ ಕೈ ಮಾಡೋಕೆ ಬರ್ತೀಯಾ? ಹೀಗಂತ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕನೊಬ್ಬ ಪೌರ ಕಾರ್ಮಿಕನ ಮೇಲೆ ಹಲ್ಲೆ ಮಾಡಲು ಹೋದ ಘಟನೆ ಉಡುಪಿಯಲ್ಲಿ ನಡೆದಿದೆ.
ಪೌರ ಕಾರ್ಮಿಕನ ಮೇಲೆ ಅಂಗಡಿ ಮಾಲೀಕನಿಂದ ಹಲ್ಲೆ ನಗರದ ಸಿಟಿ ಬಸ್ ನಿಲ್ದಾಣದ ಆವರಣದಲ್ಲೇ ಈ ಘಟನೆ ನಡೆದಿದೆ. ನಡುರಸ್ತೆಯಲ್ಲೇ ಪೌರಕಾರ್ಮಿಕನಿಗೆ ಅಂಗಡಿ ಮಾಲೀಕ ಮತ್ತು ಮತ್ತೊಬ್ಬ ಯುವಕ ಹಲ್ಲೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಇಷ್ಟಕ್ಕೂ ಆ ಕಾರ್ಮಿಕ ಮಾಡಿ ತಪ್ಪೇನು?
ಎಲ್ಲಾ ಕಸ ಒಟ್ಟಿಗೆ ಕೊಡ್ಬೇಡಿ, ಕಸಗಳನ್ನು ವಿಂಗಡಿಸಿ ಕೊಡಬೇಕು ಅಂತ ಹೇಳಿದ್ದಾರೆ. ಹೇಳಿದ್ದೇ ತಡ ಅಂಗಡಿ ಮಾಲೀಕ ಕಾರ್ಮಿಕನಿಗೆ ಸಾರ್ವಜನಿಕವಾಗಿ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದಾನೆ.
ಸ್ಥಳಕ್ಕೆ ಬಂದ ನಗರಸಭಾ ಅಧಿಕಾರಿಗಳನ್ನೂ ಕ್ಯಾರೆ ಮಾಡದ ಅಂಗಡಿ ಮಾಲೀಕ ಅಧಿಕಾರಿಯ ಎದುರೇ ಮತ್ತೆ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ್ದಾನೆ. ಮಾಲೀಕನ ಈ ಕೃತ್ಯಕ್ಕೆ ಆತನ ಕೆಲಸಗಾರರು ಕೂಡಾ ಸಾಥ್ ನೀಡಿದ್ದಾರೆ.