ಉಡುಪಿ:ರಾತ್ರೋರಾತ್ರಿ ಖಾಸಗಿ ವ್ಯಕ್ತಿಗಳು ನಗರಸಭೆಯ ಸ್ಥಳದಲ್ಲಿದ್ದ ಗೂಡಂಗಡಿ ತೆರವುಗೊಳಿಸಿದ್ದಕ್ಕೆ ಬೇಸತ್ತ ಯುವತಿ ಗುಂಡಿಯಲ್ಲಿ ಮಲಗಿ ಪ್ರತಿಭಟಿಸಿರುವ ಘಟನೆ ಇಲ್ಲಿನ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ನಡೆದಿದೆ.
ಗೂಡಂಗಡಿ ತೆರವು: ಕಾಂಪೌಂಡ್ ನಿರ್ಮಾಣದ ಸ್ಥಳದಲ್ಲೇ ಮಲಗಿ ಯುವತಿ ಪ್ರತಿಭಟನೆ - ಚಿಪ್ಪು ಸುಣ್ಣದ ಅಂಗಡಿ ಇಟ್ಟುಕೊಂಡಿದ್ದ ವನಿತಾ
ಉಡುಪಿ ನಗರಸಭೆ ಬಳಿ ಇದ್ದ ಗೂಡಂಗಡಿಯನ್ನು ರಾತ್ರೋರಾತ್ರಿ ಖಾಸಗಿ ವ್ಯಕ್ತಿಗಳು ಧ್ವಂಸಗೊಳಿಸಿದ್ದಾರೆ. ಈ ದುಷ್ಕೃತ್ಯದಿಂದ ಬೇಸತ್ತ ಯುವತಿ ಕಾಂಪೌಂಡ್ ನಿರ್ಮಿಸಲು ತೋಡಿದ್ದ ಗುಂಡಿಯಲ್ಲೇ ಮಲಗಿ ಪ್ರತಿಭಟಿಸಿದ್ದಾಳೆ.
![ಗೂಡಂಗಡಿ ತೆರವು: ಕಾಂಪೌಂಡ್ ನಿರ್ಮಾಣದ ಸ್ಥಳದಲ್ಲೇ ಮಲಗಿ ಯುವತಿ ಪ್ರತಿಭಟನೆ woman protest](https://etvbharatimages.akamaized.net/etvbharat/prod-images/768-512-10211317-thumbnail-3x2-udp.jpg)
ಮಹಿಳೆ ಪ್ರತಿಭಟನೆ
ವನಿತಾ ಎಂಬ ಯುವತಿ ಚಿಪ್ಪು ಸುಣ್ಣದ ಗೂಡಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಳು. ರಾತ್ರೋರಾತ್ರಿ ತನ್ನ ಗೂಡಂಗಡಿಯನ್ನು ನೆಲಸಮ ಮಾಡಿದ್ದಕ್ಕೆ ಆಕೆ ದಿಗ್ಭ್ರಮೆಗೊಳಗಾಗಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಯುವತಿ ಕಂಗಾಲಾಗಿದ್ದಾಳೆ. ಸ್ಥಳೀಯರು ಕೂಡ ಖಾಸಗಿಯವರ ದುಷ್ಕೃತ್ಯಕ್ಕೆ ಸಿಡಿಮಿಡಿಗೊಂಡಿದ್ದಾರೆ.
ಖಾಸಗಿಯವರು ಕಾಂಪೌಂಡ್ ನಿರ್ಮಿಸಲು ತೋಡಿದ್ದ ಗುಂಡಿಯಲ್ಲೇ ಮಲಗಿ ಯುವತಿ ಪ್ರತಿಭಟಿಸಿದ್ದಾಳೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.