ಕರ್ನಾಟಕ

karnataka

ETV Bharat / state

ಗೋ ಬ್ಯಾಕ್​ ಅಭಿಯಾನದ ವಿರುದ್ಧ ಕಿಡಿ: ಕಾರ್ಯಕರ್ತರೇ ನನ್ನ ಬಲ ಎಂದ ಶೋಭಾ ಕರಂದ್ಲಾಜೆ - undefined

‘ಗೋ ಬ್ಯಾಕ್ ಶೋಭಕ್ಕ’ ಅಭಿಯಾನ ಕಾಂಗ್ರೆಸ್​ನ ಷಡ್ಯಂತ್ರ ಎಂದು ಸಂಸದೆ ಶೋಭಾ ಕಂದ್ಲಾಜೆ ಕಿಡಿಕಾರಿದ್ದಾರೆ. ನನ್ನ ಕ್ಷೇತ್ರದ ಜನರಿಗೆ ನಾನು ಏನು ಕೆಲಸ ಮಾಡಿದ್ದೇನೆ ಎಂದು ಗೊತ್ತಿದೆ. ಮತ್ತೆ ಲೋಕಸಭೆಗೆ ಆಯ್ಕೆಯಾಗುತ್ತೇನೆ ಎಂದು ಸಂಸದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೋ ಬ್ಯಾಕ್​ ಅಭಿಯಾನದ ವಿರುದ್ಧ ಆಕ್ರೋಶ

By

Published : Mar 23, 2019, 5:14 AM IST

ಉಡುಪಿ: ನಾಡಿನ ಗಮನ ಸೆಳೆದಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಆಯ್ಕೆಯಾಗಿದ್ದು, ಸಾಂಕೇತಿಕ ನಾಮಪತ್ರ ಸಲ್ಲಿಸಿದ್ದಾರೆ. ಆದ್ರೆ ಹಾಲಿ ಸಂಸದೆಯ ಬಗ್ಗೆ ಫೇಸ್ ಬುಕ್ ವಾರ್ ಮಾತ್ರ ನಿಂತಿಲ್ಲ.

‘ಗೋ ಬ್ಯಾಕ್ ಶೋಭಕ್ಕ’ ಅನ್ನೋ ಫೇಸ್ ಬುಕ್ ಪೇಜ್ ಕಳೆದ ಒಂದು ತಿಂಗಳಿಂದ ಸಕ್ರಿಯವಾಗಿದ್ದು, ಸದ್ಯ ಶೋಭಾ ಕರಂದ್ಲಾಜೆ ಅವರ ವಿರುದ್ಧ ನೋಟಾ ಅಭಿಯಾನಕ್ಕೆ ಕರೆ ನೀಡಿದೆ. ಇದೆಲ್ಲಾ ಕಾಂಗ್ರೆಸ್ ಷಡ್ಯಂತ್ರ ಅಂತ ಸಂಸದೆ ಗರಂ ಆಗಿದ್ದಾರೆ.ಗೋ ಬ್ಯಾಕ್​ ಅಭಿಯಾನದ ವಿರುದ್ಧ ಆಕ್ರೋಶ

‘ಗೋ ಬ್ಯಾಕ್ ಶೋಭಕ್ಕ’ ಹೀಗೊಂದು ಫೇಸ್ ಬುಕ್ ಪೇಜ್ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ನಿರಂತರ ಕಿಡಿಕಾರುತ್ತಿದೆ. ಹಾಲಿ ಸಂಸದೆಗೆ ಮತ್ತೆ ಟಿಕೆಟ್ ಕೊಡಬಾರದು ಅಂತ ಪಣತೊಟ್ಟಿದ್ದ ಈ ಪೇಜ್​ನ ಫಾಲೋವರ್ಸ್​​ಗಳ ಆಕ್ರೋಶ ಈಗ ದುಪ್ಪಟ್ಟಾಗಿದೆ. ಗುರುವಾರ ರಾತ್ರಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಈ ಪೇಜ್​ನಲ್ಲಿ ನೋಟಾ ಅಭಿಯಾನ ಆರಂಭಿಸಲಾಗಿದೆ.

ಕಾರ್ಯಕರ್ತರ ಅಭಿಮತಕ್ಕೆ ವಿರುದ್ಧವಾಗಿ ಅವಕಾಶ ನೀಡಲಾಗಿದೆ ಎಂದು ಕಿಡಿಕಾರಲಾಗುತ್ತಿದೆ. ಒಂದು ಹೆಜ್ಜೆ ಮುಂದಕ್ಕೆ ಹೋಗಿ ‘ಸದ್ಯದಲ್ಲೇ ಒಂದು ಸಿಡಿ ಬಿಡುಗಡೆ ಮಾಡ್ತೇವೆ’ ಎಂಬ ಸ್ಟೇಟಸ್ ಹಾಕಿರೋದು ಕುತೂಹಲ ಹುಟ್ಟಿಸಿದೆ. ಇದೆಲ್ಲಾ ಹತಾಶ ಕಾಂಗ್ರೆಸ್​ನ ಷಡ್ಯಂತ್ರ, ಕಾಂಗ್ರಸ್​ಗೆ ಈ ಕ್ಷೇತ್ರದಲ್ಲಿ ಅಭ್ಯರ್ಥಿನೇ ಇಲ್ಲ, ಚುನಾವಣೆ ಬಂದಾಗ ಇವರಿಗೆ ಸಿಡಿಗಳು, ಡೈರಿಗಳ ನೆನಪಾಗುತ್ತೆ ಅಂದ್ರು.

ಕಾಂಗ್ರೆಸ್​ನವರುಹುಚ್ಚರು. ಅವರಿಗೆ ತಲೆ ಕೆಟ್ಟಿದೆ. ಕಾಂಗ್ರೆಸ್​ ನೈತಿಕವಾಗಿ ಅಧಂಪತನವಾಗಿದೆ. ತೇಜೋವಧೆ ಮಾಡುವ ಈ ಷಡ್ಯಂತ್ರಕ್ಕೆ ಕರಾವಳಿ ಜನ ಬಲಿಯಾಗಲ್ಲ ಎಂದು ಹೇಳಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಹೆಚ್ಚಿನ ಜವಾಬ್ದಾರಿ ಇದ್ದಿದ್ದರಿಂದ ಲೋಕಸಭಾ ಕ್ಷೇತ್ರಕ್ಕೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗಿಲ್ಲ ಅನ್ನೋದನ್ನು ಸಂಸದೆಯೂ ಒಪ್ಪಿಕೊಳ್ಳುತ್ತಾರೆ. ಸೈನಿಕರಂತೆ ದುಡಿಯುವ ಬಿಜೆಪಿ ಕಾರ್ಯಕರ್ತರು ನನ್ನ ಬೆಂಬಲಕ್ಕಿದ್ದಾರೆ ಅನ್ನೋ ವಿಶ್ವಾಸದಲ್ಲಿ ಶೋಭಾ ಕರಂದ್ಲಾಜೆ ಮತ್ತೆ ಫೀಲ್ಡ್​ಗೆ ಇಳಿದಿದ್ದಾರೆ.

For All Latest Updates

TAGGED:

ABOUT THE AUTHOR

...view details