ಉಡುಪಿ:ಕಾರ್ಕಳ ತಾಲೂಕಿನ ನಿಟ್ಟೆ ಅರ್ಬಿ ಫಾಲ್ಸ್ ನಲ್ಲಿಸ್ನೇಹಿತರಿಬ್ಬರು ಫಾಲ್ಸ್ನ ತುದಿಯಲ್ಲಿ ಸೆಲ್ಫಿ ತೆಗೆಯುವ ಸಂದರ್ಭ ಕಾಲು ಜಾರಿ ನೀರಿಗೆ ಬಿದ್ದಿದ್ದು, ಒಬ್ಬ ಪಾರಾಗಿದ್ದಾನೆ, ಮತ್ತೊಬ್ಬ ನಾಪತ್ತೆಯಾಗಿದ್ದು, ಶೋಧಕಾರ್ಯ ಮುಂದುವರಿದಿದೆ.
ಸೆಲ್ಫಿ ದುಸ್ಸಾಹಸ: ನಿಟ್ಟೆ ಅರ್ಬಿ ಫಾಲ್ಸ್ನಿಂದ ಜಾರಿ ಬಿದ್ದ ಯುವಕ ನಾಪತ್ತೆ - ಕಾರ್ಕಳ ತಾಲೂಕಿನ ನಿಟ್ಟೆ ಅರ್ಬಿ ಫಾಲ್ಸ್
ಫಾಲ್ಸ್ ವೀಕ್ಷಣೆಗಾಗಿ ಹೋಗಿದ್ದ ಇಬ್ಬರು ಸ್ನೇಹಿತರು ಸೆಲ್ಫಿ ತೆಗೆಯಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದು, ಓರ್ವ ಪಾರಾಗಿದ್ದು ಮತ್ತೋರ್ವ ನಾಪತ್ತೆಯಾಗಿದ್ದಾನೆ.
ಯುವಕ ನೀರು ಪಾಲು
ನಂದಳಿಕೆ ಕುಂಟಲಗುಂಡಿ ನಿವಾಸಿ ಸುದೇಶ್ (18 ) ನಾಪತ್ತೆಯಾಗಿರುವ ಯುವಕ. ಸುದೇಶ್ ಮತ್ತು ಭರತ್ ಎಂಬ ಇಬ್ಬರು ಸ್ನೇಹಿತರು ನೀರಿನಲ್ಲಿ ಮೋಜು ಮಾಡುತ್ತ ಸೆಲ್ಫಿ ಕ್ಲಿಕ್ಕಿಸುವ ಭರದಲ್ಲಿ ನೀರಿಗೆ ಜಾರಿ ಬಿದ್ದಿದ್ದಾರೆ. ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಭರತ್ ಅಪಾಯದಿಂದ ಪಾರಾಗಿದ್ದಾನೆ. ಇನ್ನು ನಾಪತ್ತೆಯಾಗಿರುವ ಸುದೇಶ್ಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಘಟನಾ ಸ್ಥಳಕ್ಕೆ ತಹಸೀಲ್ದಾರ್, ಅಗ್ನಿಶಾಮಕ ದಳದವರು ಭೇಟಿ ನೀಡಿ ಹುಡುಕಾಟ ನಡೆಸುತ್ತಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.