ಕರ್ನಾಟಕ

karnataka

ETV Bharat / state

ಕೆಎಸ್‌ಆರ್‌ಟಿಸಿಯ ಸ್ಕ್ರಾಪ್‌ ಬಸ್‌ ಈಗ ವಿದ್ಯಾರ್ಥಿಗಳ ಸ್ಮಾರ್ಟ್‌ ಕ್ಲಾಸ್‌ನ 'ಅಕ್ಷರ ಬಂಡಿ'..

ಲಾಕ್ ಡೌನ್ ವೇಳೆ ಟೈಮ್ ಪಾಸ್‌ಗೆ ಅಂತ ಯುವಕ ಆಟಿಕೆ ಬಸ್ ನಿರ್ಮಾಣ ಮಾಡಿದ್ದ. ಯುವಕನ ಅದೃಷ್ಟವೋ ಏನೋ ಸಾರಿಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಕೆಎಸ್‌ಆರ್‌ಟಿಸಿ ಬಸ್ ಕೊಡುಗೆ ನೀಡಿದ್ರು. ಸದ್ಯ ಇದೇ ಬಸ್ ಜ್ಞಾನ ದೇಗುಲವಾಗಿ ಹೊಸ ಸ್ವರೂಪ ಪಡೆದಿದ್ದು, ಮಕ್ಕಳಿಗೆ ಅಕ್ಷರ ಕಲಿಸುವ ಬಂಡಿಯಾಗಿದೆ.

By

Published : Mar 15, 2022, 7:14 PM IST

Updated : Mar 15, 2022, 7:50 PM IST

scrap ksrtc bus converted into smart class bus in Udupi district
ಕೆಎಸ್‌ಆರ್‌ಟಿಸಿಯ ಸ್ಕ್ರಾಪ್‌ ಬಸ್‌ ಈಗ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಕ್ಲಾಸ್‌ನ 'ಅಕ್ಷರ ಬಂಡಿ'

ಉಡುಪಿ: ಕುಂದಾಪುರ ತಾಲೂಕಿನ ಬಗ್ವಾಡಿಯ ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ಗಾಗಿ ವಿನೂತನ ಪ್ರಯತ್ನ ಮಾಡಲಾಗಿದ್ದು, ಸ್ಕ್ರಾಪ್‌ ಆಗಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲಾವಿದ ಪ್ರಶಾಂತ್‌ ಆಚಾರ್‌ ಹೊಸ ಸ್ವರೂಪವನ್ನು ಕೊಟ್ಟಿದ್ದಾರೆ.

ಕೆಎಸ್‌ಆರ್‌ಟಿಸಿಯ ಸ್ಕ್ರಾಪ್‌ ಬಸ್‌ ಈಗ ವಿದ್ಯಾರ್ಥಿಗಳ ಸ್ಮಾರ್ಟ್‌ ಕ್ಲಾಸ್‌ನ 'ಅಕ್ಷರ ಬಂಡಿ'

ಶಿಕ್ಷಣದ ಮೇಲಿನ ಪ್ರೀತಿಯಿಂದಾಗಿ ಹಳೆಯ ವಿದ್ಯಾರ್ಥಿಯೂ ಆಗಿರುವ ಪ್ರಶಾಂತ್‌ ಅವರು ಸರ್ಕಾರಿ ಬಸ್‌ ಅನ್ನು ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತ ಸ್ಮಾರ್ಟ್‌ ಕ್ಲಾಸ್‌ ಆಗಿ ಪರಿವರ್ತಿಸಿದ್ದಾರೆ. ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ಇವರು ಮೊದಲು ಫಾರ್ಮ್ ಶೀಟ್ ಬಳಸಿ ಕೆಎಸ್‌ಆರ್‌ಟಿಸಿ ಬಸ್ ಮಾದರಿಗಳನ್ನ ತಯಾರಿಸಿದ್ದರು. ಇದನ್ನು ಗಮನಿಸಿದ ಹಿಂದಿನ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರು ಪ್ರಶಾಂತ್ ಅವರ ಕಲೆಯನ್ನ ಮೆಚ್ಚಿ ಕೆಎಸ್ಆರ್ಟಿಸಿ ಸ್ಕ್ರಾಫ್ ಬಸ್‌ ಅನ್ನು ಉಚಿತವಾಗಿ ನೀಡಿದ್ದರು.

ಸದ್ಯ ಇದೇ ಬಸ್ಸನ್ನು ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್‌ಗೆ ಬಳಸಿಕೊಳ್ಳಲಾಗಿದೆ. ಸುಮಾರು 25 ವಿದ್ಯಾರ್ಥಿಗಳು ಇಲ್ಲಿ ಕೂರಬಹುದು. ಒಳಗಡೆ ಪ್ರಾಜೆಕ್ಟ್ ವ್ಯವಸ್ಥೆ, ಸ್ವಾತಂತ್ರ್ಯ ಹೋರಾಟಗಾರು, ಸಾಹಿತಿಗಳ ಭಾವಚಿತ್ರಗಳನ್ನು ಅಂಟಿಸಲಾಗಿದೆ. ಅಲ್ಲದೇ ಸಾಹಿತ್ಯ ಪುಸ್ತಕಗಳನ್ನು ಬಸ್ ಒಳಗಡೆ ಇಡಲಾಗಿದೆ. ವಿದ್ಯಾರ್ಥಿಗಳಿಗೆ ಬಸ್‌ನೊಳಗೆ ಕುಳಿತು ಪಾಠ ಕೇಳೋದು ಹೊಸ ಅನುಭವವನ್ನ ನೀಡುತ್ತಿದೆ.

ಇದನ್ನೂ ಓದಿ:ನಮಗೆ ಶಿಕ್ಷಣ, ಹಿಜಾಬ್​ ಎರಡೂ ಮುಖ್ಯ.. ಹಿಜಾಬ್ ಪರ ಉಡುಪಿ ವಿದ್ಯಾರ್ಥಿನಿಯರ ಮಾತು

Last Updated : Mar 15, 2022, 7:50 PM IST

For All Latest Updates

TAGGED:

ABOUT THE AUTHOR

...view details