ಉಡುಪಿ:ಉಡುಪಿಯ ಹಲವೆಡೆ ಆಕಾಶದಲ್ಲಿ ಸಾಲು ಚಲಿಸುವ ನಕ್ಷತ್ರಗಳನ್ನು ಕಂಡು ಜನಬೆಚ್ಚಿಬಿದ್ದ ಘಟನೆ ಭಾನುವಾರ ನಡೆದಿದೆ. ಜಿಲ್ಲೆಯ ಹಲವೆಡೆ ಚಲಿಸುವ ನಕ್ಷತ್ರಗಳು ಗೋಚರವಾಗಿದ್ದು, ಏಲಿಯನ್ಗಳು ಭೂಮಿಗೆ ಬಂದಿವೆ ಎಂದು ಮಾತನಾಡಿಕೊಂಡ ಜನ ಕ್ಷಣಕಾಲ ಕುತೂಹಲಭರಿತರಾಗಿದ್ದರು. ವಾಸ್ತವದಲ್ಲಿ ಇವು ನಕ್ಷತ್ರಗಳಲ್ಲ, ಏಲಿಯನ್ಗಳೂ ಅಲ್ಲ. ಹೆಚ್ಚಿನ ಇಂಟರ್ನೆಟ್ ವ್ಯವಸ್ಥೆಗಾಗಿ ಆಕಾಶಕ್ಕೆ ಹರಿಯಬಿಟ್ಟ ಸ್ಯಾಟ್ಲೈಟ್ಗಳಾಗಿದ್ದು, ಅಮೆರಿಕದಿಂದ ಹರಿಯ ಬಿಟ್ಟಿರುವ ಕೃತಕ ಉಪಗ್ರಹಗಳಾಗಿವೆ.
ಹೆಚ್ಚಿನ ಇಂಟರ್ನೆಟ್ ವ್ಯವಸ್ಥೆಗಾಗಿ ಆಕಾಶಕ್ಕೆ ಹಾರಿಸಿರುವ 53 ಕೃತಕ ಉಪಗ್ರಹಗಳು ಇವಾಗಿವೆ. ಶುಕ್ರವಾರವಷ್ಟೇ ಆಕಾಶಕ್ಕೆ ಸ್ಯಾಟ್ಲೈಟ್ಗಳನ್ನು ಹಾರಿಸಲಾಗಿತ್ತು. ಸಾಲಾಗಿ ಸಾಗುವ ಸ್ಯಾಟಿಲೈಟ್ಗಳನ್ನು ಕಂಡು ಜನ ಅಚ್ಚರಿ ಪಟ್ಟಿದ್ದಾರೆ. ವರ್ಷದ ಹಿಂದೆಯೂ ಉಡುಪಿ ಸೇರಿದಂತೆ ಹಲವಡೆ ಸ್ಯಾಟಲೈಟ್ಗಳು ಗೋಚರಿಸಿದ್ದವು. ಆಕಾಶ ಸ್ವಚ್ಛವಾಗಿದ್ದರೆ ಇಂದು ಕೂಡ ಸ್ಯಾಟಲೈಟ್ಗಳು ಕಾಣಿಸುವ ಸಾಧ್ಯತೆ ಇದೆ. ಆಕಾಶದಲ್ಲಿ ಬೆಳಕಿನ ಸಾಲಿನ ಕೌತುಕ ಇಂದು ನೋಡಬಹುದಾಗಿದೆ ಅಂತಾ ಖಗೋಳಶಾಸ್ತ್ರಜ್ಞ ಅತುಲ್ ಭಟ್ ಹೇಳಿದ್ದಾರೆ.
ಶನಿವಾರ ಮಂಗಳೂರು, ಉಡುಪಿ ಭಾಗದಲ್ಲಿ 30 ರಿಂದ 50 ಸರಳ ರೇಖೆಯ ಚುಕ್ಕಿಗಳು ಕಂಡಿವೆ. ಈ ಬೆಳಕಿನ ಚುಕ್ಕಿಗಳು ಒಂದೇ ಸರಳ ರೇಖೆಯಲ್ಲಿ ಸಂಚರಿಸಿದಂತೆ ಕಂಡು ಬಂದಿವೆ. ಜನ ಇದನ್ನು ಏಲಿಯನ್ಸ್ ಎಂದು ಭಾವಿಸಿ ಪ್ರಶ್ನಿಸುತ್ತಿದ್ದಾರೆ. ಆದರೇ ಇವು ಸ್ಟಾರ್ಲಿಂಕ್ ಎಂಬ ಕಂಪನಿಯ ಸ್ಯಾಟಲೈಟ್ಗಳಾಗಿದ್ದು, ಅಮೆರಿಕದ ವಿಜ್ಞಾನಿ ಎಲಾನ್ ಮಸ್ಕ್ ಅವರ ಕಂಪನಿ ಸ್ಟಾರಲಿಂಕ್ ಆಗಿದ್ದು, ಈ ಕಂಪನಿಯಿಂದ ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕಳುಹಿಸಲಾಗಿದೆ.
ಹಳ್ಳಿಗಳು ಮತ್ತು ನೆಟ್ವರ್ಕ್ ಸಿಗದ ಪ್ರದೇಶಗಳಿಗೆ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ. ಭೂಮಿಯ ಸುತ್ತಲೂ ಹನ್ನೆರಡು ಸಾವಿರ ಸ್ಯಾಟ್ಲೈಟ್ಗಳನ್ನು ಕವಚದ ರೂಪದಲ್ಲಿ ಕಳುಹಿಸಲಿದ್ದಾರೆ. ನೆಟ್ವರ್ಕ್ ತಲುಪದ ಪ್ರದೇಶಗಳಿಗೂ ಇಂಟರ್ನೆಟ್ ವ್ಯವಸ್ಥೆ ಮಾಡಲು ಇವುಗಳನ್ನು ಬಿಡಲಾಗಿದೆ. ಮುಂದಿನ ದಿನಗಳಲ್ಲಿ 44,000 ಸ್ಯಾಟ್ಲೈಟ್ಗಳನ್ನು ಬಿಡುವ ಸಾಧ್ಯತೆ ಇದೆ. ಈಗಾಗಲೇ ಮೂರುವರೆ ಸಾವಿರ ಸ್ಯಾಟಲೈಟ್ಗಳು ಬಿಡುಗಡೆಯಾಗಿವೆ.