ಉಡುಪಿ:ಮೀನುಗಾರರಿಗೆ ಐದು ಸಾವಿರ ಮನೆ ಮಂಜೂರಾತಿ ಮಾಡಲಾಗಿದೆ. ಕರಾವಳಿಯ ಕುಚ್ಚಲಕ್ಕಿ ಬೇಡಿಕೆಯ ಬಗ್ಗೆ ಮಂಜೂರಾತಿಯನ್ನು ಕೊಟ್ಟು ಉಡುಪಿಗೆ ಬಂದಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಜಿಲ್ಲೆಯ ಕಾಪುವಿನಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಸಂದರ್ಭ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕರಾವಳಿಯ ಎಂಟು ಬಂದರು ಅಭಿವೃದ್ಧಿ ಆಗಲಿದೆ. ನೂರು ಹೈಸ್ಪೀಡ್ ಬೋಟ್ ಮಂಜೂರು ಮಾಡಲಾಗಿದೆ. ಮೀನುಗಾರರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಮೀನುಗಾರರು ಕೇವಲ ಶೇ. 10 ಹೂಡಿಕೆ ಮಾಡಿದರೆ ಸಾಕು ಎಂದು ಹೇಳಿದರು.
ಪೆಟ್ರೋಲಿಯಂ ಎಂಜಿನ್ ಗೆ ಸಬ್ಸಿಡಿ :ನಾಡದೋಣಿ ದೋಣಿಗೆ ಪೆಟ್ರೋಲ್ ಎಂಜಿನ್ ಅಳವಡಿಸಿದರೆ ಸರಕಾರ ಪೆಟ್ರೋಲಿಯಂ ಎಂಜಿನ್ ಗೆ ಸಬ್ಸಿಡಿ ಕೊಡಲಾಗುತ್ತದೆ. ಕಾಂಗ್ರೆಸ್ 50 ವರ್ಷದಿಂದ ಕೊಡದ ಎಸ್ಸಿ ಎಸ್ಟಿ ಮೀಸಲಾತಿ ನಾವು ಕೊಟ್ಟಿದ್ದೇವೆ. ಸಾಮಾಜಿಕ ಕ್ರಾಂತಿಯ ನಿಲುವನ್ನು ಬಿಜೆಪಿ ತೆಗೆದುಕೊಂಡಿದೆ ಎಂದು ಹೇಳಿದರು.