ಉಡುಪಿ: ಕಲ್ಸಂಕ ರಾಷ್ಟ್ರೀಯ ಹೆದ್ದಾರಿ ಬಳಿ ಶ್ರೀಕೃಷ್ಣ ಮಠದ ರಾಜಾಂಗಣ ಯಾತ್ರಿಕರ ವಾಹನ ನಿಲುಗಡೆ ಸ್ಥಳವನ್ನು ಸಂಪರ್ಕಿಸುವ ರಸ್ತೆಯ ತಿರುವಿನಲ್ಲಿ ಕಾಂಕ್ರೀಟ್ ರಸ್ತೆಯ ಜಲ್ಲಿ ಕಲ್ಲುಗಳು ಕಿತ್ತುಹೋಗಿದ್ದು, ರಸ್ತೆಯ ಒಳಗಿದ್ದ ಕಬ್ಬಿಣದ ಸರಳುಗಳು ಮೇಲೆದ್ದಿವೆ.
ಅಪಾಯಕ್ಕೆ ಆಹ್ವಾನಿಸುತ್ತಿರುವ ಕಬ್ಬಿಣದ ಸರಳುಗಳು: ರಸ್ತೆ ದುರಸ್ತಿಗೆ ಆಗ್ರಹ - udupi latest news
ಈ ಮುಖ್ಯ ರಸ್ತೆಯಲ್ಲಿ ನಸುಕಿನ ಜಾವ ವಾಯು ವಿಹಾರಿಗಳು, ಯಾತ್ರಿಕರು, ಪಾದಚಾರಿಗಳು ಸಂಚರಿಸುತ್ತಿರುತ್ತಾರೆ. ಕಬ್ಬಿಣದ ಕಂಬಿಗಳು ಕಾಲಿಗೆ ತಾಗಿ ಪಾದಚಾರಿಗಳು ಎಡವಿ ಬಿದ್ದು ಗಾಯಾಳುಗಳಾದ ಘಟನೆಗಳು ಇಲ್ಲಿ ನಡೆದಿವೆ.
![ಅಪಾಯಕ್ಕೆ ಆಹ್ವಾನಿಸುತ್ತಿರುವ ಕಬ್ಬಿಣದ ಸರಳುಗಳು: ರಸ್ತೆ ದುರಸ್ತಿಗೆ ಆಗ್ರಹ road damaged at kalsanka high way road](https://etvbharatimages.akamaized.net/etvbharat/prod-images/768-512-10721576-thumbnail-3x2-aekj3w.jpg)
ಕಲ್ಸಂಕ ಬಳಿ ಅಪಾಯ ಆಹ್ವಾನಿಸುತ್ತಿರುವ ಕಬ್ಬಿಣದ ಸರಳುಗಳು; ರಸ್ತೆ ದುರಸ್ಥಿಗೆ ಸಾಮಾಜಿಕ ಕಾರ್ಯಕರ್ತರ ಆಗ್ರಹ
ಅಪಾಯಕ್ಕೆ ಆಹ್ವಾನಿಸುತ್ತಿರುವ ಕಬ್ಬಿಣದ ಸರಳುಗಳು!
ಈ ಸುದ್ದಿಯನ್ನೂ ಓದಿ;ಮಹಾರಾಷ್ಟ್ರದಲ್ಲಿ ರೂಪಾಂತರ ಕೋವಿಡ್ ಪತ್ತೆ: ರಾಜ್ಯದ ಗಡಿಯಲ್ಲಿ ಮತ್ತೆ ಕಟ್ಟೆಚ್ಚರ
ಕಳಪೆ ಕಾಮಗಾರಿಯಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಮುಖ್ಯ ರಸ್ತೆಯಲ್ಲಿ ನಸುಕಿನ ಜಾವ ವಾಯು ವಿಹಾರಿಗಳು, ಯಾತ್ರಿಕರು, ಪಾದಚಾರಿಗಳು ಸಂಚರಿಸುತ್ತಿರುತ್ತಾರೆ. ಕಬ್ಬಿಣದ ಕಂಬಿಗಳು ಕಾಲಿಗೆ ತಾಗಿ ಪಾದಚಾರಿಗಳು ಎಡವಿ ಬಿದ್ದು ಗಾಯಾಳುಗಳಾದ ಘಟನೆಗಳು ಇಲ್ಲಿ ನಡೆದಿವೆ. ನಗರಾಡಳಿತ ತಕ್ಷಣ ಕಬ್ಬಿಣದ ಸರಳುಗಳನ್ನು ಕತ್ತರಿಸುವಂತೆ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.
Last Updated : Feb 21, 2021, 10:42 PM IST