ಉಡುಪಿ: ನಿನ್ನೆ ತಡರಾತ್ರಿ ಸೋಡಿಯಂ ಕೊರತೆಯಿಂದ ಉಂಟಾದ ಉಸಿರಾಟದ ಸಮಸ್ಯೆಯಿಂದ ಪೇಜಾವರ ಶ್ರೀಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೇಜಾವರ ಶ್ರೀಗಳಿಗೆ ಉಸಿರಾಟ ಸಮಸ್ಯೆ: ಆಸ್ಪತ್ರೆಗೆ ದಾಖಲು - pejavara swamiji
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪೇಜಾವರ ಶ್ರೀಗಳನ್ನು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೇಜಾವರ ಶ್ರೀ
ನಿನ್ನೆ ನಗರದ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದ ಪೇಜಾವರ ಶ್ರೀಗಳ ರಕ್ತದ ಚಲನೆಯಲ್ಲಿ ದಿಢೀರ್ ವ್ಯತ್ಯಾಸದ ಹಿನ್ನೆಲೆ ಇಂದು ಬೆಳಗಿನ ಜಾವ ಕೆಎಂಸಿಗೆ ದಾಖಲಿಸಲಾಗಿದೆ. ಪೇಜಾವರ ಶ್ರೀಗಳಿಗೆ ಐಸಿಯುನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಶ್ರೀಗಳಿಗೆ ನ್ಯುಮೋನಿಯಾ ಸಮಸ್ಯೆ ಇದೆ ಎಂದು ತಿಳಿಸಿದ್ದಾರೆ. 24 ಗಂಟೆಗಳ ಕಾಲ ಯಾರಿಗೂ ಶ್ರೀಗಳ ಭೇಟಿಗೆ ಸಿಬ್ಬಂದಿ ಅವಕಾಶ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.