ಉಡುಪಿ: ವಿಶ್ವದಲ್ಲಿ ತಲ್ಲಣ ಮೂಡಿಸಿರುವ ಕೊರೊನಾವನ್ನು ನಾಶ ಮಾಡುವ ಹೋರಾಟದಲ್ಲಿ ಕೆನಡಾದಲ್ಲಿ ಕನ್ನಡಿಗ ವೈದ್ಯ ಕೈಗೊಂಡಿರುವ ಸಂಶೋಧನೆ ಹೊಸ ಭರವಸೆ ಮೂಡಿಸಿದ್ದಾರೆ.
ಕೊರೊನಾಗೆ ಮದ್ದು ಕಂಡು ಹಿಡಿಯಲು ಕನ್ನಡಿಗ ವೈದ್ಯನ ಸಂಶೋಧನೆ..! ಕನ್ನಡಿಗ ಡಾ.ಪ್ರವೀಣ್ ನೆಕ್ಕಾರ್ ನೇತೃತ್ವದಲ್ಲಿ ಕೆನಡಾದ ಪ್ರತಿಷ್ಠಿತ ವಾಟರ್ ಲೂ ಯೂನಿವರ್ಸಿಟಿಯಲ್ಲಿ ನಡೆಯುತ್ತಿರುವ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯೂನಿವರ್ಸಿಟಿಯಲ್ಲಿ ಫಾರ್ಮಸಿ ವಿಭಾಗದ ಮುಖ್ಯಸ್ಥರಾಗಿರುವ ಡಾ ಪ್ರವೀಣ್ ರಾವ್ ಮಹಾಮಾರಿ ಕೊರೊನಾಕ್ಕೆ ಟೈಪ್ 2 ಡಯಾಬಿಟೀಸ್ ಮದ್ದು ಸಂಶೋಧನೆ ಹಂತದಲ್ಲಿದೆ ಎಂದಿದ್ದಾರೆ. ಕೊರೊನಾ ವೈರಸ್ ತಡೆಯಲು ಪರಿಣಾಮಕಾರಿ ಮದ್ದು ಹುಡಕುತ್ತಿರುವುದು ಪ್ರಾರಂಭಿಕ ಹಂತದಲ್ಲೇ ವಿಶ್ವದ ಗಮನ ಸೆಳೆದಿದೆ.
6 ಪಿಹೆಚ್ಡಿ ವಿದ್ಯಾರ್ಥಿಗಳ ತಂಡದ ಜೊತೆ ಸಂಶೋಧನೆಯಲ್ಲಿ ತೊಡಗಿರುವ ಡಾ.ಪ್ರವೀಣ್ ರಾವ್ ಸಂಶೋಧನೆಗೆ ಕೆನಡಾ ಸರ್ಕಾರ ಅನುದಾನ ನೀಡುತ್ತಿದೆ. ವಿಶ್ವದ ಪ್ರಮುಖ ವೈದ್ಯ ವಿಜ್ಞಾನ ಸುದ್ದಿ ಪತ್ರಿಕೆಗಳಲ್ಲಿ ಡಾ. ಪ್ರವೀಣ್ ಸಂಶೋಧನೆ ಸದ್ದು ಮಾಡುತ್ತಿದೆ. ಹೊಸತೊಂದು ಔಷಧ ಕಂಡು ಹಿಡಿಯಲು ಹತ್ತರಿಂದ ಹದಿನೈದು ವರ್ಷ ತಗುಲುತ್ತದೆ. ಅದಕ್ಕೆ ನೂರು ಕೋಟಿ ಡಾಲರ್ಗೂ ಅಧಿಕ ಖರ್ಚಾಗುತ್ತದೆ. ಈಗಾಗಲೇ ನಾವು ಕಂಡುಹಿಡಿದಿರುವ ಐದಾರು ಸಾವಿರ ಔಷಧ ಫಾರ್ಮುಲಾಗಳಿವೆ. ಈ ಫಾರ್ಮುಲಾಗಳ ಸಂರಚನೆಯನ್ನು ಬಳಸಿಕೊಂಡು ವೈರಸ್ ವಿರುದ್ಧ ಹೋರಾಡಬೇಕು.
ಟೈಪ್ 2 ಡಯಾಬಿಟೀಸ್ ಮದ್ದಿನಲ್ಲಿ ಕೊರೊನಾದ ವ್ಯಾಪಕ ಹರಡುವಿಕೆಯನ್ನು ತಡೆಯುವ ಶಕ್ತಿ ಇದೆ. ಇದು ಈಗಾಗಲೇ ವೈದ್ಯಕೀಯ ಪ್ರಯೋಗಗಳಿಂದ ದೃಢಪಟ್ಟಿದೆ. ಈ ಔಷಧಿಯನ್ನು ಕೊರೊನಾ ಸೋಂಕಿತರ ಮೇಲೆ ಪ್ರಯೋಗಿಸುವ ಪ್ರಕ್ರಿಯೆ ಬಾಕಿ ಇದೆ .