ಕರ್ನಾಟಕ

karnataka

ETV Bharat / state

ಉಡುಪಿಯಲ್ಲಿ ಬಾವಿಗೆ ಬಿದ್ದ ವೃದ್ಧನ ರಕ್ಷಣೆ - udupi news

ನಿನ್ನೆ ಮಧ್ಯಾಹ್ನದ ಸಮಯದಲ್ಲಿ ಬಾವಿಗೆ ಬಿದ್ದಿದ್ದ ಅಚ್ಯುತರನ್ನು ಸರಿಯಾದ ಸಮಯಕ್ಕೆ ರಕ್ಷಣೆ ಮಾಡಿ ಪ್ರಾಣ ಉಳಿಸಲಾಗಿದೆ.

By

Published : Jan 16, 2021, 3:51 AM IST

ಉಡುಪಿ: ಕುಂದಾಪುರ ಅಂಕದಕಟ್ಟೆಯಲ್ಲಿ ಬಾವಿಗೆ ಬಿದ್ದ ವೃದ್ಧನನ್ನ ರಕ್ಷಣೆ ಮಾಡಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಾವಿಯಲ್ಲಿ ಮುಳುಗುತ್ತಿದ್ದ ವೃದ್ಧನನ್ನು ರಕ್ಷಿಸಿದ್ದಾರೆ. ಅಚ್ಯುತ ( 80) 30 ಅಡಿ ಆಳದ ಬಾವಿಗೆ ಬಿದ್ದು ಬದುಕಿ ಬಂದವರು.

ನಿನ್ನೆ ಮಧ್ಯಾಹ್ನದ ಸಮಯದಲ್ಲಿ ಬಾವಿಗೆ ಬಿದ್ದಿದ್ದ ಅಚ್ಯುತರ ರಕ್ಷಣೆಗಾಗಿ ಮನೆಯವರು ತಕ್ಷಣ ಕುಂದಾಪುರ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ರು. ಬಾವಿಗೆ ಇಳಿದ ಅಗ್ನಿಶಾಮಕ ಸಿಬ್ಬಂದಿ ನಾಗರಾಜ್ ಪೂಜಾರಿ ಅವರು ವೃದ್ಧರ ರಕ್ಷಣೆ ಮಾಡಿದ್ದಾರೆ.

ABOUT THE AUTHOR

...view details