ಕರ್ನಾಟಕ

karnataka

ETV Bharat / state

ಉಡುಪಿ: ಕಣ್ಮರೆಯಾದ ಮೀನುಗಾರರ ಕುಟುಂಬಕ್ಕೆ ಹೆಚ್ಚುವರಿ ಪರಿಹಾರ ಘೋಷಣೆ - Relief for a family of seven who were on a golden triangle fishing boat

ಕಣ್ಮರೆಯಾಗಿದ್ದ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟ್​​ನಲ್ಲಿದ್ದ ಏಳು ಮಂದಿ ಮೀನುಗಾರರ ಕುಟುಂಬಗಳಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರವಾಗಿ ತಲಾ ಹತ್ತು ಲಕ್ಷ ರೂಪಾಯಿ ಘೋಷಣೆ ಮಾಡಿದೆ.

Relief for a family of seven who were on a golden triangle fishing boat
ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟ್​

By

Published : Nov 19, 2020, 4:34 PM IST

ಉಡುಪಿ: ನಿಗೂಢವಾಗಿ ಕಣ್ಮರೆಯಾಗಿದ್ದ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟ್​ನಲ್ಲಿದ್ದ ಏಳು ಮಂದಿ ಮೀನುಗಾರರ ಕುಟುಂಬಗಳಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ಘೋಷಿಸಿದೆ.

ಬೋಟ್​ ಅವಘಡದಲ್ಲಿ ಕಣ್ಮರೆಯಾದ ಮೀನುಗಾರರು

ಎರಡು ವರ್ಷಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಸುವರ್ಣ ತ್ರಿಭುಜ ಬೋಟ್​​ ಕಾಣೆಯಾಗಿತ್ತು. ಅದರಲ್ಲಿದ್ದ ಏಳು ಮಂದಿ ಮೀನುಗಾರರು ಕೂಡ ಕಣ್ಮರೆಯಾಗಿದ್ದರು. ಬಡ ಮೀನುಗಾರರ ಕುಟುಂಬದ ಅಧಾರ ಸ್ಥಂಭಗಳೇ ಕಣ್ಮರೆಯಾಗಿದ್ದವು. ಮೊದಲ ಹಂತದಲ್ಲಿ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗಿತ್ತು. ಈಗ ಎರಡನೇ ಹಂತದ ಪರಿಹಾರ ಮೊತ್ತ ನೀಡಲಾಗಿದೆ.

ಏಳು ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂಪಾಯಿ ಘೋಷಣೆ ಮಾಡಲಾಗಿದ್ದು, ಮೀನುಗಾರರ ಸಮುದಾಯ ರಾಜ್ಯ ಸರ್ಕಾರದ ಈ ನೆರವಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

For All Latest Updates

TAGGED:

ABOUT THE AUTHOR

...view details