ಉಡುಪಿ: ಅಷ್ಟಮಿ ಬಂದಕೂಡಲೇ ಕ್ರಷ್ಣನೂರಿನಲ್ಲಿ ವೇಷ ಭೂಷಣಗಳ ಅಬ್ಬರ ಶುರುವಾಗುತ್ತೆ. ಆದ್ರೆ ಈ ಬಾರಿ ಕೊರೊನಾದಿಂದಾಗಿ ಕೃಷ್ಣನೂರಿನಲ್ಲಿ ವೇಷಗಳ ಅಬ್ಬರಕ್ಕೆ ಬ್ರೇಕ್ ಬಿದ್ದಿದೆ. ಆದರೆ ಪ್ರತೀ ವರ್ಷ ತನ್ನದೇ ವಿಶಿಷ್ಟ ವೇಷದ ಮೂಲಕ ಗಮನ ಸೆಳೆಯೋ ರವಿ ಕಟಪಾಡಿ ಈ ಬಾರಿ ಹಾಲಿವುಡ್ ಡೆವಿಲ್ ಆಗಿ ಮಿಂಚುತ್ತಿದ್ದಾರೆ.
ಅಷ್ಟಮಿ ಹಿನ್ನೆಲೆ ಕಟಪಾಡಿ ಈ ಬಾರಿ ಹಾಲಿವುಡ್ ಡೆವಿಲ್ ಆಗಿ ಕೊರೊನಾ ವಿರುದ್ಧ ಅರಿವು ಮೂಡಿಸಲು ವಿಶೇಷ ವೇಷದ ಮೂಲಕ ಸುದ್ದಿಯಾಗ್ತಿದ್ದಾರೆ. ಎರಡು ದಿನಗಳ ಕಾಲ ರವಿ ಜಿಲ್ಲೆಯ ಹಳ್ಳಿ ಹಳ್ಳಿಗೆ ತೆರಳಿ ಕೊರೊನಾ ವೇಷದ ಮೂಲಕ ಜನಜಾಗೃತಿ ಮೂಡಿಸಲಿದ್ದಾರೆ.
ಕೃಷ್ಣ ಜನ್ಮಾಷ್ಟಮಿಗೆ ಹಾಲಿವುಡ್ ಡೆವಿಲ್ ಸ್ಟೈಲ್ನಲ್ಲಿ ರಸ್ತೆಗಿಳಿದ ರವಿ ಕಟಪಾಡಿ ಪ್ರತಿವರ್ಷ ರವಿ ವಿಶೇಷ ವೇಷಗಳನ್ನು ಧರಿಸಿ ಹಣ ಸಂಗ್ರಹಿಸಿ ಕಷ್ಟದಲ್ಲಿರುವವರಿಗೆ ನೆರವು ನೀಡುತ್ತಾ ಬಂದಿದ್ದಾರೆ. ಈ ಬಾರಿ ರವಿ ಕೊರೊನಾದಿಂದಾಗಿ ಫಂಡ್ ಕಲೆಕ್ಟ್ ಮಾಡುವುದನ್ನು ನಿಲ್ಲಿಸಿದ್ದು, ಕಷ್ಟದಲ್ಲಿರೋ ಜನರು, ಭೀಕರ ಕಾಯಿಲೆಯಿಂದ ಬಳಲುತ್ತಿರೋ 58 ಮಂದಿಗೆ ಸುಮಾರು 50 ಲಕ್ಷಕ್ಕೂ ಹೆಚ್ಚು ಸಹಾಯವನ್ನು ಈಗಾಗಲೇ ಮಾಡಿದ್ದಾರೆ.
ಕಟ್ಟಡ ಕಾರ್ಮಿಕನಾಗಿ ದುಡಿಯುತ್ತಿರುವ ರವಿ ಕಟಪಾಡಿ ಅಷ್ಟಮಿ ಬಂದ ಕೂಡಲೇ ಅವರ ಟೀಮ್ನೊಂದಿಗೆ ವಿಶೇಷ ವೇಷದೊಂದಿಗೆ ಗಮನ ಸೆಳೆಯುತ್ತಾರೆ. ಸಾಮಾಜಿಕ ಕಾಳಜಿ ಜೊತೆಗೆ ಅವರ ಅಪರೂಪದ ವೇಷ ಭೂಷಣ ಜನರ ಮನಗೆದ್ದಿದೆ.