ಉಡುಪಿ:ಲಾಕ್ಡೌನ್ ವೇಳೆ ಉಡುಪಿಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಕೃತ್ಯವೊಂದು ನಡೆದಿದೆ.
ಲಿಫ್ಟ್ ಕೊಡೋದಾಗಿ ಹೇಳಿ ಅತ್ಯಾಚಾರಕ್ಕೆ ಯತ್ನ: ಉಡುಪಿಯಲ್ಲಿ ಯುವಕನ ದುರ್ವರ್ತನೆ - ಲಿಫ್ಟ್ ಕೊಡೋದಾಗಿ ಹೇಳಿ ಅತ್ಯಾಚಾರಕ್ಕೆ ಯತ್ನ
ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಉಡುಪಿಯ ಬ್ರಹ್ಮಾವರ ಬಳಿ ನಡೆದಿದೆ.
ಲಿಫ್ಟ್ ಕೊಡುವುದಾಗಿ ನಂಬಿಸಿ ಮಹಿಳೆಯ ಮೇಲೆ ಅತ್ಯಾಚಾರ ಯತ್ನ ನಡೆದಿದೆ. ಬ್ರಹ್ಮಾವರದಿಂದ ಸಂತೆಕಟ್ಟೆಗೆ ದಿನಸಿ ಕಿಟ್ ಪಡೆಯಲು ಬಂದಿದ್ದ ಮಹಿಳೆ ದಿನಸಿ ಕಿಟ್ ಪಡೆದುಕೊಂಡು ನಿರ್ಜನ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಬನ್ನಿ ಹೋಗೋಣ ಎಂದು ಬೈಕ್ ನಿಲ್ಲಿಸಿ ಹತ್ತಿಸಿಕೊಂಡಿದ್ದಾನೆ.
ಯುವಕನನ್ನು ನಂಬಿ ಬೈಕ್ ಏರಿದ ಮಹಿಳೆಯನ್ನು ಕಾಡಿಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನ ನಡೆಸಿದ ಯುವಕ ಬಳಿಕ ಪರಾರಿಯಾಗಿದ್ದಾನೆ.
ಬ್ರಹ್ಮಾವರದ ಕುಂಜಾಲು ಜಂಕ್ಷನ್ ಬಳಿ ನಡೆದ ಘಟನೆ ನಡೆದಿದ್ದು ಬ್ರಹ್ಮಾವರ ಠಾಣೆಯಲ್ಲಿ ಮಹಿಳೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.