ಕರ್ನಾಟಕ

karnataka

ETV Bharat / state

ಸರ್ಕಾರದ ನಡೆ ಹಳ್ಳಿ ಕಡೆ : ಗ್ರಾಮಸ್ಥರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಿದ ಕಂದಾಯ ಸಚಿವ - ಸರ್ಕಾರದ ನಡೆ ಹಳ್ಳಿ ಕಡೆ: ಗ್ರಾಮಸ್ಥರ ಸಮ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಿದ ಕಂದಾಯ ಸಚಿವರು

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಡಿಯಲ್ಲಿ ಬ್ರಹ್ಮಾವರ ತಾಲೂಕು ಕೊಕ್ಕರ್ಣೆ ಗ್ರಾಮದಲ್ಲಿ ಸಚಿವ ಅಶೋಕ್ ಅವರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು. ಜಟಕಾಬಂಡಿ ಹತ್ತಿ ಬಂದ ಅಶೋಕ್, ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಣೆ ಮಾಡಿದರು..

R ashok  visited udupi for grama vastavya
ಮಹಾ ಕಂದಾಯ ಮೇಳದಲ್ಲಿ 11500 ಮಂದಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಹಕ್ಕು ಪತ್ರ, ದಾಖಲೆ ಪತ್ರಗಳನ್ನು ವಿತರಿಸಲಾಯಿತು

By

Published : Feb 20, 2022, 4:32 PM IST

Updated : Feb 20, 2022, 5:28 PM IST

ಉಡುಪಿ :ಕೊರೊನಾ ಎರಡು ವರ್ಷ ರಾಜ್ಯದ, ದೇಶದ ಅಭಿವೃದ್ಧಿಗೆ ಅಡ್ಡಗಾಲು ಹಾಕಿತ್ತು. ಸರ್ಕಾರದ ಬಜೆಟ್ ಹಣ ಎಲ್ಲವೂ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಬೇಕಾಯಿತು. ಇದರಿಂದ ಜನರ ಸಮಸ್ಯೆ ಕಡತಗಳೊಳಗೆ ಕೊಳೆಯುತ್ತಿತ್ತು. ಮೂರನೇ ಅಲೆಯ ಆತಂಕ ಕಡಿಮೆಯಾಗುತ್ತಲೇ ಕಂದಾಯ ಸಚಿವ ಆರ್ ಅಶೋಕ್ ಉಡುಪಿ ಜಿಲ್ಲೆಗೆ ಆಗಮಿಸಿ ಜನರ ಸಮಸ್ಯೆಗಳನ್ನು ಆಲಿಸಿದರು.

ಮಹಾ ಕಂದಾಯ ಮೇಳದಲ್ಲಿ 11500 ಮಂದಿ ಫಲಾನುಭವಿಗಳಿಗೆ ಆರ್​ ಆಶೋಕ್​ ಹಕ್ಕು ಪತ್ರ, ದಾಖಲೆ ಪತ್ರಗಳನ್ನು ವಿತರಿಸಿದರು

ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಅವರ ಕ್ಷೇತ್ರ ಕಾರ್ಕಳ ತಾಲೂಕಿನ ಮಹಾ ಕಂದಾಯ ಮೇಳದಲ್ಲಿ 11,500 ಮಂದಿ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳ ಹಕ್ಕು, ದಾಖಲೆ ಪತ್ರಗಳನ್ನು ವಿತರಿಸಲಾಯಿತು.

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಡಿಯಲ್ಲಿ ಬ್ರಹ್ಮಾವರ ತಾಲೂಕು ಕೊಕ್ಕರ್ಣೆ ಗ್ರಾಮದಲ್ಲಿ ಸಚಿವ ಅಶೋಕ್ ಅವರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು. ಜಟಕಾಬಂಡಿ ಹತ್ತಿ ಬಂದ ಅಶೋಕ್, ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಣೆ ಮಾಡಿದರು.

ಅಂಗ ಊನ ಇರುವವರಿಗೆ ಕೃತಕ ಕಾಲುಗಳನ್ನು ಸಚಿವರೇ ಫಿಕ್ಸ್ ಮಾಡಿದರು. ಟ್ರ್ಯಾಕ್ಟರ್ ಸ್ಟಾರ್ಟ್ ಮಾಡುವ ಮೂಲಕ, ಹಸುಗಳನ್ನು ನೀಡುವ ಮೂಲಕ ಫಲಾನುಭವಿಗಳಿಗೆ ಸವಲತ್ತು ವಿತರಿಸಿದರು. ಡೀಮ್ಡ್, ಕುಮ್ಕಿ ಜಮೀನಿನ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

ಉಡುಪಿ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಎಕರೆ ಡೀಮ್ಡ್ ಭೂಮಿ ಸುಪ್ರೀಂ ಕೋರ್ಟ್ ಮೂಲಕ ರೈತರಿಗೆ, ಕೃಷಿ ಚಟುವಟಿಕೆ ಮಾಡುವವರಿಗೆ ಸಿಗಲಿದೆ ಎಂದು ಸಚಿವರು ಭರವಸೆ ನೀಡಿದರು.

ಸಮಾಜದ ಬಹಳ ಹಿಂದುಳಿದ ಕುಡುಬಿ ಸಮುದಾಯದ ಮೂಲ ಮನೆಗೆ ಅಶೋಕ್ ಭೇಟಿ ಕೊಟ್ಟರು. ಗುಮ್ಟೆ ನುಡಿಸಿ, ಕನಕಾಂಬರ ಹೂವು ಮಾಲೆ ಹಾಕಿ ಸಾಂಪ್ರದಾಯಿಕ ಶೈಲಿಯಲ್ಲಿ ಸಚಿವರನ್ನ ಅಧಿಕಾರಿಗಳನ್ನು ಬರಮಾಡಿಕೊಳ್ಳಲಾಯಿತು. ಕೃಷಿ ಪರಿಕರಗಳನ್ನು, ಬೇಟೆಯ ಬಲೆ, ವೀಕ್ಷಿಸಿ ಪಾರಂಪರಿಕ ಶೈಲಿಯಲ್ಲಿ ಪೀಠೋಪಕರಣಗಳ ಮಾಹಿತಿ ಪಡೆದರು.

ಇದನ್ನೂ ಓದಿ:ಹರಿಹರದಲ್ಲಿ ನಾಗರಿಕತೆ ಬಗ್ಗೆ ಪಾಠ ಮಾಡಿದ ಸಿಎಂ ಬೊಮ್ಮಾಯಿ

Last Updated : Feb 20, 2022, 5:28 PM IST

For All Latest Updates

TAGGED:

ABOUT THE AUTHOR

...view details