ಕಾಪು(ಉಡುಪಿ):ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಚಾಲಕನೊಬ್ಬ ಲಾರಿ ಓಡಿಸುತ್ತಿದ್ದ. ಈ ಕುರಿತು ಮಾಹಿತಿ ಬಂದ ಕೂಡಲೇ ಕಾರ್ಯಪ್ರವೃತರಾದ ಎಸ್ಐ ರಾಘವೇಂದ್ರ ಲಾರಿ ಚೇಸ್ ಮಾಡಿ ಚಾಲಕನನ್ನು ವಶಕ್ಕೆ ಪಡೆದು ಭಾರಿ ಅನಾಹುತ ತಪ್ಪಿಸಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಅಡ್ಡಾದಿಡ್ಡಿ ಲಾರಿ ಚಾಲನೆ, ಚೇಸ್ ಮಾಡಿ ವಶಕ್ಕೆ ಪಡೆದ ಕಾಪು ಎಸ್ಐ: ಸಾರ್ವಜನಿಕರಿಂದ ಮೆಚ್ಚುಗೆ
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿಯಾಗಿ ಚಾಲಕನೊಬ್ಬ ಲಾರಿ ಓಡಿಸುತ್ತಿದ್ದ. ಈ ಕುರಿತು ಮಾಹಿತಿ ಬಂದ ಕೂಡಲೇ ಕಾರ್ಯಪ್ರವೃತರಾದ ಎಸ್ಐ ರಾಘವೇಂದ್ರ ಲಾರಿ ಚೇಸ್ ಮಾಡಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
Kapu S I Raghavendra
ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಹಾರಾಷ್ಟ್ರ ನೋಂದಣಿಯ ಲಾರಿಯನ್ನು ಕುಡಿದ ಅಮಲಿನಲ್ಲಿ ಚಾಲಕ ಅಡ್ಡಾದಿಡ್ಡಿಯಾಗಿ ಓಡಿಸುತ್ತಿದ್ದ. ಈ ಬಗ್ಗೆ ಹಿಂದೆ ಸಾಗುತ್ತಿದ್ದ ವಾಹನ ಸವಾರರು ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತರಾದ ಕಾಪು ಎಸ್ಐ ರಾಘವೇಂದ್ರ ಲಾರಿಯನ್ನು ತಡೆದು ಚಾಲಕ ಮತ್ತು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾಪು ಎಸ್ಐ ರಾಘವೇಂದ್ರ ಅವರ ಸಮಯಪ್ರಜ್ಞೆಯಿಂದಾಗಿ ಲಾರಿ ಚಾಲಕನಿಂದ ಉಂಟಾಗುತ್ತಿದ್ದ ಅನಾಹುತ ತಪ್ಪಿದ್ದು, ಇವರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.